ತಾಳಿಕೋಟಿ

ಇಂದು ಟಿಪ್ಪು ಸುಲ್ತಾನ ಭಾವೈಕ್ಯತಾ ಸಮಾವೇಶ

ಇಂದು ಟಿಪ್ಪು ಸುಲ್ತಾನ ಭಾವೈಕ್ಯತಾ ಸಮಾವೇಶ


              ತಾಳಿಕೋಟಿ  22: ಪಟ್ಟಣದ ಹಜರತ್ ಟಿಪ್ಪು ಸುಲ್ತಾನ್ ರಕ್ಷಣಾ ಸಮಿತಿ(ರಿ) ವತಿಯಿಂದ ಟಿಪ್ಪು ಸುಲ್ತಾನರ 276 ನೇ ಜಯಂತಿ ಅಂಗವಾಗಿ "ಟಿಪ್ಪು ಭಾವೈಕ್ಯತಾ ಸಮಾವೇಶ" ಇಂದು(ನ.23) ಜರುಗಲಿದೆ. ಪಟ್ಟಣದ ಶ್ರೀ ಸಾಂಭ ಪ್ರಭು ಶರಣ ಮುತ್ಯಾ ದೇವಸ್ಥಾನ ಆವರಣದಲ್ಲಿ ಸಂಜೆ 6 ಘಂಟೆಗೆ ನಡೆಯಲಿರುವ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸ್ಥಳೀಯ ಶ್ರೀಖಾಸ್ಗತೇಶ್ವರ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು, ತಾಳಿಕೋಟಿ ಶ್ರೀ ಸಾಂಬ ಪ್ರಭು ಶರಣರ ಮಠದ ಶ್ರೀ ಶರಣಪ್ಪನವರು ಶರಣರು, ಧಾರ್ಮಿಕ ಮುಖಂಡ ಸಯ್ಯದ್ ಶಕೀಲ ಅಹ್ಮದ್ ಖಾಜಿ ವಹಿಸಲಿದ್ದಾರೆ.

             ಕೆ ಎಸ್ ಡಿ ಎಲ್ ಅಧ್ಯಕ್ಷರು, ಮುದ್ದೇಬಿಹಾಳ ಮತಕ್ಷೇತ್ರ ಶಾಸಕರಾದ ಶ್ರೀ ಅಪ್ಪಾಜಿ ನಾಡಗೌಡರು ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪ ಸಂಖ್ಯಾತ ಕಲ್ಯಾಣ, ಹಜ್ಜ್‌ ಹಾಗೂ ವಕ್ಫ್‌ ಸಚಿವರಾದ ಯು.ಟಿ. ಖಾದರ್, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವರಾದ ವಿಜಯಾನಂದ ಕಾಶಪ್ಪನವರ ಸಮಾರಂಭವನ್ನು ಉದ್ಘಾಟಿಸುವರು. 

             ದೇ.ಹಿಪ್ಟರಗಿ ಶಾಸಕರಾದ ರಾಜುಗೌಡ ಪಾಟೀಲ, ಸಿಂದಗಿ ಶಾಸಕ ಅಶೋಕ ಮನಗೂಳಿ, ಸೈಯದ್ ಫೈಸಲ್ ಸಕಾಫ್ ಖಾದ್ರಿ ಸಾದತ್, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಜ್ಯಾ ನಜೀರ ಚಿಕ್ಕನೆರಳೆ ಅವರ ಘನ ಉಪಸ್ಥಿತಿ ಇರುವುದು. ಮುಖ್ಯ ಅತಿಥಿಗಳಾಗಿ ವಿಜಯಪುರ ನಗರ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ, ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ಎಸ್‌. ಪಾಟೀಲ (ಯಾಳಗಿ), ವಿ.ವಿ.ಸಂಘ ಸದಸ್ಯರಾದ ವೀರಪಕ್ಷಯ್ಯ ಹಿರೇಮಠ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ (ನಾವದಗಿ), ಬ್ಲಾಕ್ ಕಾಂಗ್ರೆಸ್ ತಾಳಿಕೋಟಿ ಅಧ್ಯಕ್ಷ ಎಂ. ಕೆ. ಚೋರಗಸ್ತಿ, ಅಂಜುಮನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್ ರಜಾಕ ಮನಗೂಳಿ,

            ಇದಗಾ ಸಮಿತಿ ಅಧ್ಯಕ್ಷ ಮಾಸಸಾಬ ಕೆಂಭಾವಿ, ಮುದ್ದೇಬಿಹಾಳ ಸಿಪಿಐ ಮೊಹಮ್ಮದ್ ಫಸೀವುದ್ದೀನ, ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ, ಕಾಂಗ್ರೆಸ್ ಯುವ ಮುಖಂಡ ನಿರಂಜನಶಾ ಮಕಾನದಾರ, 

               ಕೊಣ್ಣೂರ, ಫೌಂಡೇಶನ್ ಅಧ್ಯಕ್ಷ ಸಿ.ಬಿ. ಅಸ್ಕಿ, ಖ್ಯಾತ ಉದ್ಯಮಿ ಮದನಸಾಬ ಸಾಲವಾಡಗಿ, ರೋಶನ್ ಡೋಣಿ, ಪುರಸಭೆ ಮಾಜಿ ಅಧ್ಯಕ್ಷೆ ಜುಬೇದಾಬೇಗಮ್ ಜಮಾದಾಲ, ಪುರಸಭೆ ಮಾಜಿ ಅಧ್ಯಕ್ಷೆ ಶ್ರೀಮತಿ ಅಕ್ಕಮಹಾದೇವಿ ಕಟ್ಟಿಮನಿ, ಮುತ್ತಪ್ಪ ಚಮಲಾಪೂರ, ಪುರಸಭೆ ಮಾಜಿ ಸದಸ್ಯ ಆರೀಫ ಹೊನ್ನುಟಗಿ, ದಲಿತ ಮುಖಂಡ ಜೈ ಭೀಮ ಮುತ್ತಗಿ, ಇಲ್ಕಲ್ ನಗರಸಭೆ ಸದಸ್ಯೆ ರೇಷ್ಮಾ ಮಾರಬಸರಿ, ಹಜರತ್ ಟಿಪ್ಪು ಸುಲ್ತಾನ್ ರಕ್ಷಣಾ ಸಮಿತಿ ಅಧ್ಯಕ್ಷ ಸದ್ದಾಮ್ ಮನಗೂಳಿ, ಉಪಾಧ್ಯಕ್ಷೆ ರಿಯಾಜ ಡೋಣಿ ಆಗಮಿಸಲಿದ್ದಾರೆ. ಪಟ್ಟಣದ ಸರ್ವ ಸಮಾಜದ ಬಂಧುಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅಧ್ಯಕ್ಷ ಸದ್ದಾಂ ಮನಗೂಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ