ತಾಳಿಕೋಟಿ

ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಸ್ಮಾರ್ಟ ಕ್ಲಾಸಗೆ ಚಾಲನೆ

ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಸ್ಮಾರ್ಟ ಕ್ಲಾಸಗೆ ಚಾಲನೆ


             ತಾಳಿಕೋಟಿ  22: ಪಟ್ಟಣದ   ಎಸ್‌.ಎಸ್‌.ವಿದ್ಯಾಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ಶ್ರೀ ಸಂಗಮೇಶ್ವರ ಪ್ರೌಢಶಾಲೆಯ ಸಹಯೋಗದಲ್ಲಿ ಕ್ಷೇತ್ರ ಶಿಕ್ಷಣಾಧಿಗಳಾದ ಎಮ್‌.ಎಸ್‌.ಬಡದಾನಿ ಹಾಗೂ ಅಕ್ಷರ ದಾಸೋಹ ಯೋಜನೆಯ ನಿರ್ದೇಶಕರಾದ ಡಾ.ಎಮ್‌. ಎಮ. ಬೆಳಗಲ್ಲ,ಎಸ್‌. ಎಸ್‌.ಎಲ್‌.ಸಿ.ನೋಡಲ್ ಅಧಿಕಾರಿಗಳಾದ ಎಮ್‌.ಕೆ.ಬಾಗವಾನ ಅವರಿಂದ ಸ್ಮಾರ್ಟ ಕ್ಲಾಸಗೆ ಚಾಲನೆ ನೀಡಿಲಾಯಿತು.

            ಎಸ್‌.ಎಸ್‌.ವಿದ್ಯಾಸಂಸ್ಥೆಯ ಬಡ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಂತ್ರಜ್ಞಾನದ ಮೂಲಕ ಶಿಕ್ಷಣ ಪಡೆದುಕೊಳ್ಳಲಿ ಎಂಬ ಮಹಾದಾಶಯದಿಂದ ಎಲ್ಲಾ ವಿಭಾಗಗಳಿಗೆ ಸ್ಮಾರ್ಟ ಕ್ಲಾಸ್ ಸೌಲಭ್ಯ ಸಂಸ್ಥೆಯ ಆಡಳಿತ ಮಂಡಳಿಯವರು ಒದಗಿಸಿ ಕೊಟ್ಟಿರುವರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಗಳಾದ ಎಮ್‌.ಬಡದಾನಿ ಯವರಿಗೆ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಡಾ:ಎಮ್‌.ಎಮ್‌.ಬೆಳಗಲ್ಲ ರವರಿಗೆ ಹಾಗೂ ತಾಲ್ಲೂಕಿನ ಎಸ್‌.ಎಸ್‌.ಎಲ್‌.ಸಿ.ನೋಡಲ್ ಅಧಿಕಾರಿಗಳಾದ ಎಮ್‌.ಕೆ.ಬಾಗವಾನರಿಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಚ್‌.ಎಸ್‌.ಪಾಟೀಲ,ಕಾರ್ಯದರ್ಶಿ ಸಚಿನ.ಎಚ್‌.ಪಾಟೀಲರು ಗೌರವಿಸಿ ಸನ್ಮಾನಿಸಿದರು. 


ಸುದ್ದಿ ಓದಿ