ಕಂಪ್ಲಿ

ಪಿಎಂ ಸೂರ್ಯಘರ್ ಮುಫ್ತ ಬಿಜಲಿ ಯೋಜನೆ- ಕಂಪ್ಲಿಯಲ್ಲಿ ಸಾರ್ವಜನಿಕರಿಂದ ನೋಂದಣಿ ಆರಂಭ

ಪಿಎಂ ಸೂರ್ಯಘರ್ ಮುಫ್ತ ಬಿಜಲಿ ಯೋಜನೆ- ಕಂಪ್ಲಿಯಲ್ಲಿ ಸಾರ್ವಜನಿಕರಿಂದ ನೋಂದಣಿ ಆರಂಭ

ಲೋಕದರ್ಶನ ವರದಿ 


ಕಂಪ್ಲಿ 06:  ಪಟ್ಟಣದ ಜೆಸ್ಕಾಂ ಕಚೇರಿಯಲ್ಲಿ ಇಂದಿನಿಂದ ಆರಂಭವಾದ ಪಿಎಂ ಸೂರ್ಯಘರ್ ಮುಫ್ತ ಬಿಜಲಿ ಯೋಜನೆಯ ಮನೆಗಳ ಮೇಲ್ಛಾವಣಿ ಸೋಲಾರ್ ರೂಫ್ ಟಾಫ್ ಸಿಸ್ಟಮ್ ಗಳನ್ನು ಅಳವಡಸಿಕೊಳ್ಳುವ ಯೋಜನೆಯ ಮೂರು ದಿನಗಳ ಜಾಗೃತಿ ಕಾರ್ಯಕ್ರಮವನ್ನು ಕಂಪ್ಲಿ ಜೆಸ್ಕಾಂ ಉಪವಿಭಾಗದ ಎಇಇ ಕೆ.ಶ್ರೀನಿವಾಸ್ ಪ್ರಸಾದ್ ಚಾಲನೆ ನೀಡಿದರು. 

ನಂತರ ಮಾತನಾಡಿದ ಅವರು ಪಿಎಂ ಸೂರ್ಯಘರ್ ಮುಫ್ತ ಬಿಜಲಿ ಯೋಜನೆಯು ಮನೆಗಳ ಮೇಲ್ಛಾವಣಿ ಮೇಳೆ ಸೋಲಾರ್ ರೂಫ್ ಟಾಫ್ ಸಿಸ್ಟಮ್ ಗಳನ್ನು ಅಳವಡಿಸುವ ಮೂಲಕ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿರುವ ಸರ್ಕಾರದ ಮಹತ್ವಾಂಕ್ಷಿ ಯೋಜನೆ ಇದಾಗಿದೆ.

ಈ ಯೋಜನೆಯಡಿಯಲ್ಲಿ ಸೌರ ಘಟಕ ಸ್ಥಾಪಿಸಲು ಮಾನದಂಡ ಶೇ.60ರಷ್ಟು ಸಹಾಯಧನ ಒದಗಿಸಲಾಗುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿಯವರು ಪ್ರಾರಂಭಿಸಲಾದ ಈ ಯೋಜನೆಯಿಂದ ಭಾರತದ 1 ಕೋಟಿ ಕುಟುಂಬಗಳಿಗೆ ಲಾಭವಾಗತ್ತದೆ ಎಂದರು.

ಈ ಯೋಜನೆಯಲ್ಲಿ ಮನೆಗಳ ಮೇಲ್ಛಾವಣಿ ಮೇಲೆ 1.ಕಿ.ವ್ಯಾ.ಗೆ 30 ಸಾವಿರ, 2 ಕಿ.ವ್ಯಾ.ಗೆ 60 ಸಾವಿರ ಹಾಗೂ 3 ಕಿ.ವ್ಯಾ.ಗೆ 78 ಸಾವಿರ ರೂಗಳ ಸಹಾಯಧನ ಸಿಗಲಿದೆ. ಜೊತೆಗೆ 25 ವರ್ಷಗಳ ಕಾಲ ಇ-ಸೈನ್ ಪಿಪಿಎ, 5 ವರ್ಷ ಉಚಿತ ನಿರ್ವಹಣೆ, ಮತ್ತು ಬ್ಯಾಂಕ್ ಲೋನ್ ಸೌಲಭ್ಯವು ಶೇ.7 ರಷ್ಟಕ್ಕೆ ಸಿಗಲಿದೆ ಎಂದು ವಿವರಿಸಿದರು. 


ಸುದ್ದಿ ಓದಿ