ಮಹಲಿಂಗಪುರ

ವಿಧಾನ ಪರಿಷತ್ ಉಪ ಸಭಾಪತಿ ಉಮಾಶ್ರೀ ಅವರಿಗೆ ಗೌರವ ಸನ್ಮಾನ

ವಿಧಾನ ಪರಿಷತ್ ಉಪ ಸಭಾಪತಿ ಉಮಾಶ್ರೀ ಅವರಿಗೆ ಗೌರವ ಸನ್ಮಾನ

ಲೋಕದರ್ಶನ ವರದಿ 


ಮಹಾಲಿಂಗಪುರ 17 :  ಪಟ್ಟಣದ ದೇವಿ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ನಡೆದಿರುವ ಆರನೇ ದಿವಸದ ಶರನ್ನವರಾತ್ರಿ ಮಹೋತ್ಸವ ಸಮಾರಂಭಕ್ಕೆ ವಿಧಾನ ಪರಿಷತ್ ಉಪ ಸಭಾಪತಿ ಉಮಾಶ್ರೀ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಹಟಗಾರ ಸಮಾಜದ ಬಾಂಧವರು ಗೌರವ ಸನ್ಮಾನ ನೀಡಿದರು. 

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಹದಿನೈದು ವರ್ಷಗಳಿಂದ ಈ ದೇವಿ ಸನ್ನಿಧಾನಕ್ಕೆ ಬಂದು ದರ್ಶನ ಪಡೆದು ಹೋಗುತ್ತಿದ್ದೇನೆ.


ನಾನು ಪ್ರತಿ ವರ್ಷ ಕಂಡುಕ್ಕೊಂಡಂತೆ ಇಲ್ಲಿಯ ಭಕ್ತಿ ಭಾವದ ವಾತಾವರಣ ನಿಜಕ್ಕೂ ನನ್ನನ್ನು ಭಾವ ಪರವಶಳನ್ನಾಗಿ ಮಾಡಿದೆ.  ಅಷ್ಟೇ ಅಲ್ಲ ಊರಿನ ಮತ್ತು ಸುತ್ತಮುತ್ತಲಿನ ಭಕ್ತರು ತಮ್ಮ ತನು-ಮನ-ಧನ ದೇವಿಗೆ ಅರ​‍್ಿಸಿ ಯಶಸ್ವಿ ಕಾರ್ಯಕ್ರಮಕ್ಕೆ ಕಾರಣಿಭೂತರಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ ನನ್ನನ್ನು ಸನ್ಮಾನಿಸಿದ ಸಮಾಜದ ಬಾಂಧವರು ಮತ್ತು ಉತ್ಸವ ಕಮೀಟಿಗೆ ಅಭಿನಂದನೆಗಳು ಎಂದರು. 


ಸುದ್ದಿ ಓದಿ