ಯರಗಟ್ಟಿ

ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದ ಕಬ್ಬು ಬೆಳೆ ಸುಟ್ಟು ಭಾರಿ ನಷ್ಟ

ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದ ಕಬ್ಬು ಬೆಳೆ ಸುಟ್ಟು ಭಾರಿ ನಷ್ಟ


ಯರಗಟ್ಟಿ 08: ಸಮೀಪದ ಯರಗಣವಿ ಗ್ರಾಮದ ರೈತ ಮಹಾದೇವ ಕಲ್ಲಪ್ಪ ಮಗದುಮ ಅವರಿಗೆ ಸೇರಿದ ಸರ್ವೇ ನಂ. 504/11, ಕ್ಷೇತ್ರ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಗೆ ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ತಗುಲಿ, ಸಂಪೂರ್ಣ ಕಬ್ಬು ಬೆಳೆ ಸುಟ್ಟುಹೋಗಿದೆ. ಘಟನೆಯಿಂದ ರೈತರಿಗೆ ಭಾರಿ ಪ್ರಮಾಣದ ಬೆಳೆ ನಷ್ಟ ಉಂಟಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ, ನಷ್ಟದ ಸಮರ​‍್ಕ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. 


ಸುದ್ದಿ ಓದಿ