ಯರಗಟ್ಟಿ

ವಾಲ್ಮೀಕಿ ಜಯಂತಿ ಆಚರಣೆಗೆ ಪೂರ್ವಭಾವಿ ಸಭೆ : ಅದ್ದೂರಿ ವಾಲ್ಮೀಕಿ ಜಯಂತಿ ಆಚರಣೆಗೆ ಸಿದ್ದತೆ

ವಾಲ್ಮೀಕಿ ಜಯಂತಿ ಆಚರಣೆಗೆ ಪೂರ್ವಭಾವಿ ಸಭೆ : ಅದ್ದೂರಿ ವಾಲ್ಮೀಕಿ ಜಯಂತಿ ಆಚರಣೆಗೆ ಸಿದ್ದತೆ
Preparatory meeting for Valmiki Jayanti celebrations: Arrangements underway for a grand Valmiki Jaya

ಯರಗಟ್ಟಿ 23:  ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಚರಿಸುವ ಕುರಿತು ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಶುಕ್ರವಾರ ತಹಶೀಲ್ದಾರ ಎಂ ವ್ಹಿ ಗುಂಡಪ್ಪಗೋಳ ಅವರು ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆಯ ರೂಪುರೇಷೆಗಳು, ಕಾರ್ಯಕ್ರಮದ ಸಿದ್ಧತೆ, ಮೆರವಣಿಗೆ, ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕುರಿತು ಚರ್ಚಿಸಲಾಯಿತು. ವಾಲ್ಮೀಕಿ ಸಮಾಜದ ಹಿರಿಯ ಮುಖಂಡ ಎಸ್‌. ಎಚ್‌. ನಾಯ್ಕರ ಮಾತನಾಡಿ ಮಹರ್ಷಿ ವಾಲ್ಮೀಕಿ ಅವರು ತಮ್ಮ ಮಹಾಕಾವ್ಯ ರಾಮಾಯಣದ ಮೂಲಕ ಸಮಾಜಕ್ಕೆ ಆದರ್ಶ ಜೀವನ ಮೌಲ್ಯಗಳನ್ನು ಸಾರಿದ್ದಾರೆ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಯಂತಿ ಆಚರಣೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲ ಸಮುದಾಯಗಳ ಸಹಭಾಗಿತ್ವದಲ್ಲಿ ನಡೆಯಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತಪಡಿಸಿದರು. 

ಜಯಂತಿ ಕಾರ್ಯಕ್ರಮವನ್ನು ಶಾಂತಿಯುತವಾಗಿ, ಶಿಸ್ತುಬದ್ಧವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಸಭೆಯಲ್ಲಿ ಮನವಿ ಮಾಡಲಾಯಿತು. 

ಈ ವೇಳೆ ಪಿಎಸ್‌ಐ ಎಲ್‌. ಬಿ. ಮಾಳಿ, ಪ. ಪಂ. ಅಧಿಖಾರಿ ಕೆ. ಬಿ. ಬೆಣ್ಣಿ, ಕಿರಿಯ ಆರೋಗ್ಯ ನೀರೀಕ್ಷಕ ನಾಗರಾಜ ಸಿ.ಎಸ್, ಕಾರ್ಮಿಕ ನೀರಿಕ್ಷಕ ಉಮೇಶ ಬಾಗೋಜಿ, ಕಸಾಪ ಅಧ್ಯಕ್ಷ ಟಿ. ಎಂ. ಕಾಮಣ್ಣವರ, ದೇವೆಂದ್ರ ಕಮ್ಮಾರ, ಬಾಸ್ಕರ ಹಿರೇಮೇತ್ರಿ, ಎಂ. ಜಿ. ಕಳಸಪ್ಪನ್ನವರ, ವಾಲ್ಮೀಕಿ ಸಮಾಜದ ಹಿರಿಯರಾದ ಹೊನ್ನಪ್ಪ ಖಂಡ್ರಿ, ಬಾಳೇಶ ಅಜ್ಜನಕಟ್ಟಿ, ವಿಠ್ಠಲ ನಾಯ್ಕರ, ಅಶೋಕ ನಾಯ್ಕರ, ಶಿದ್ದಪ್ಪ ದೇಸಾಯಿ, ಸೋಮಲಿಂಗಪ್ಪ ಕಾರಬಾರಿ, ಎಸ್‌. ಎಲ್‌. ಕುರುಬಗಟ್ಟಿ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ