ಕೊಪ್ಪಳ

ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆನೀರು ,ಜೀವ, ಜಲ ಅಮೂಲ್ಯವಾದದ್ದು ಇದನ್ನು ಮಿತವಾಗಿ ಬಳಸಿ : ಪ್ರತಿಮಾ ಪಟ್ಟಣಶೆಟ್ಟಿ

ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆನೀರು ,ಜೀವ, ಜಲ ಅಮೂಲ್ಯವಾದದ್ದು ಇದನ್ನು ಮಿತವಾಗಿ ಬಳಸಿ : ಪ್ರತಿಮಾ ಪಟ್ಟಣಶೆಟ್ಟಿ
Installation of a pure drinking water unit at the school. Water is life; it is precious—use it spari

           ಕೊಪ್ಪಳ 05 ;  ಮಕ್ಕಳಿಗೆ ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ, ಶುದ್ಧ ಕುಡಿಯುವ ನೀರು ಅಗತ್ಯ ವಾಗಿದೆ, ನೀರು, ಜೀವ, ಜಲ ಅಮೂಲ್ಯವಾದದ್ದು ಇದನ್ನು ಮಿತವಾಗಿ ಬಳಸಬೇಕು ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಬಳಕೆ ಮಾಡಬೇಕು ಎಂದು  ಕೊಪ್ಪಳ ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷರು ಹಾಗೂ ಕಾರ್ಯಕಾರಣಿ ಸಮಿತಿ ಸದಸ್ಯರಾದ ಪ್ರತಿಮಾ ಪಟ್ಟಣಶೆಟ್ಟಿ ರವರು ಅಭಿಪ್ರಾಯ ಪಟ್ಟರು, ಅವರು ತಾಲೂಕಿನ ಇರಕಲ್ಗಡ ಹೋಬಳಿ ವ್ಯಾಪ್ತಿಯಲ್ಲಿ ಬರುವ ಚಾಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಮಾದರಿಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕ ತಮ್ಮ ಸ್ವಂತ ಖರ್ಚು ವೆಚ್ಚದಲ್ಲಿ ಸ್ಥಾಪಿಸಿ ಅದನ್ನು ಶಾಲೆಗೆ ಸಮರೆ​‍್ಣ ಮಾಡಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು,

         ಎಲ್ಲಾ ರೋಗಗಳ ಮೂಲ  ಆಸ್ವಚ್ಛತೆಯಾಗಿದ್ದು ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಮುಂದಿನ ಪರಿಸರವನ್ನು ಸ್ವಚ್ಛವಾಗಿ ಇಡಬೇಕು, ಶುದ್ಧ ಕುಡಿಯುವ ನೀರು ಸೇವನೆಯಿಂದ ಮನುಷ್ಯನ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ ನಾವು ಆರೋಗ್ಯವಾಗಿರಲು ಶುದ್ಧ ಕುಡಿಯುವ ನೀರು ಕೂಡ ಅಗತ್ಯವಾಗಿದೆ , ಈ ದಿಶೆಯಲ್ಲಿ ಉಚಿತವಾಗಿ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ ಇದರ ಸದ್ಬಳಕೆ ಮಾಡಿ ಕೊಂಡು ಉತ್ತಮ ಅಭ್ಯಾಸ ಮಾಡಿ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರತಿಮಾ ಪಟ್ಟಣಶೆಟ್ಟಿ ಹೇಳಿದರು,

            ಈ ಸಂದರ್ಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಮೀನಾಕ್ಷಿ ಬಣ್ಣದ ಭಾವಿ ರವರು ಮಾತನಾಡಿ ಪ್ರತಿಮಾ ಪಟ್ಟಣಶೆಟ್ಟಿ ರವರ ನಿಸ್ವಾರ್ಥದ ಸೇವೆ ಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಇದೇ ರೀತಿ ಇವರು ಶಾಲೆಗಳಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿರುವುದು ತಾಲೂಕಿನಲ್ಲಿ ಇದು ನಾಲ್ಕನೇಯ ಶಾಲೆಯಾಗಿದೆ ಎಂದು  ತಿಳಿಸಿ ಅವರಿಗೆ ಕ್ಲಬ್ ಪರವಾಗಿ ಅಭಿನಂದಿಸಿದರು, ಕೊಪ್ಪಳ ಇನ್ನರ ವೀಲ್ ಕ್ಲಬ್ ಕಾರ್ಯದರ್ಶಿ ಶ್ರೀದೇವಿ ಪಾಟೀಲ್, ಐ ಎಸ್ ಓ ಲತಾ ಪಟ್ಟಣಶೆಟ್ಟಿ, ಎಡಿಟರ್ ಮಾಲಾ, ಹಿರಿಯ ಸದಸ್ಯರಾದ ಡಾ, ರಾಧಾ ಕುಲಕರ್ಣಿ ಮತ್ತು ಕವಿತಾ ಗೌಡ, ಶೋಭಾ ಹಾಗೂ ಭಾರತಿ ಸೇರಿದಂತೆ  ಪದಾಧಿಕಾರಿಗಳು ಸದಸ್ಯರು ಶಿಕ್ಷಕ ವರ್ಗದವರು ಪಾಲ್ಗೊಂಡಿದ್ದರು, 


ಸುದ್ದಿ ಓದಿ