ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ: ಯಶವಂತರಾಯಗೌಡ
ಇಂಡಿ 03: ತಾಲ್ಲೂಕಿನ ತಡವಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಡವಲಗಾ ಗ್ರಾಮದ ಗ್ರಾಮ ಚಾವಡಿ ಮುಂಬಾಗದ ಅಗಸಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಇಂಡಿ ಮತಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ನಿಂಬೆ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಶಾಸಕರು ಸಾರ್ವಜನಿಕ ಕೆಲಸಗಳನ್ನು ತ್ವರಿತ ಗತಿಯಲ್ಲಿ ಸಂಬಂಧಿಸಿ ಅಧಿಕಾರಿಗಳು ಕೆಲಸ ಮಾಡಿ ಕೊಡಬೇಕು. ಪ್ರಜಾಸೇವ ಆಂದೋಲನ ಜನಸ್ಪಂದನ ಕಾರ್ಯಕ್ರಮದಲ್ಲಿ ಬಂದ ಅರ್ಜಿಗಳನ್ನು ಇಪ್ಪತ್ತೊಂದು ದಿನಗಳ ಒಳಗಾಗಿ ಅವರ ಸಮಸ್ಯೆಗಳಿಗೆ ತಕ್ಷಣ ಪರಿಹರಿಸಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಹೇಳಿದರು.ಪ್ರಜಾಸೇವೆ ಆಂದೋಲನ ಜನಸ್ಪಂದನ ಎಂಬುದು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಆಡಳಿತಾತ್ಮಕವಾಗಿ ಅವುಗಳಿಗೆ ತ್ವರಿತ ಪರಿಹಾರ ಒದಗಿಸಲು ಸರ್ಕಾರ ಅಥವಾ ವಿವಿಧ ಸಾಮಾಜಿಕ ಸಂಸ್ಥೆಗಳು ಹಮ್ಮಿಕೊಳ್ಳುವ ಒಂದು ಮುಖ್ಯವಾದ ಜನಪರ ಕಾರ್ಯಕ್ರಮವಾಗಿದೆ. ಸಾರ್ವಜನಿಕರು ತಮ್ಮ ಪಡಿತರ ಚೀಟಿ, ಪಿಂಚಣಿ, ಕಂದಾಯ ಇಲಾಖೆಯ ದಾಖಲೆಗಳು, ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜನಸಾಮಾನ್ಯರ ಕುಂದುಕೊರತೆಗಳಿಗೆ ಹಾಗೂ ಅಗತ್ಯಗಳಿಗೆ ಧ್ವನಿಯಾಗುವುದು. ಬಸವರಾಜ ಇಂಡಿ ಆನಂದಪ್ಪ ದೇಸಾಯಿ ಎಮ್ ಆರ್ ಪಾಟೀಲ್ ತಮ್ಮಣ್ಣ ಪೂಜಾರಿ ಇಂಡಿ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಪ್ರಶಾಂತ್ ಕಾಳೆ ಹಾಗೂ ಗುರುನಗೌಡ ಪಾಟೀಲ ಕಂದಾಯ ಬಳ್ಳೊಳ್ಳಿ ಉಪ ತಹಶೀಲ್ದಾರ್ ಎಚ್ ಎಚ್ ಗುನ್ನಾಪೂರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಬಸವರಾಜ ರಾವೂರ, ಎಸ್ ಎಚ್ ಮುಜಗೊಂಡ ಬಳ್ಳೊಳ್ಳಿ ಕಂದಾಯ ನೀರೀಕ್ಷಕರಾದ ಪಿ ಎಸ್ ಕೊಡವನರ ಸಂತೋಷ್ ಹೋಟಗಾರ ಹಾಗೂ ತೋಟಗಾರಿಕೆ ಇಲಾಖೆಯ, ಕೃಷಿ ಇಲಾಖೆ, ಪಂಚಾಯಿತಿ ಇಲಾಖೆ ಅಬಕಾರಿ ಇಲಾಖೆ ಪಶು ಸಂಗೋಪನಾ ಇಲಾಖೆ ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ,ಸಮಾಜ ಕಲ್ಯಾಣ ಇಲಾಖೆ ನೀರಾವರಿ ಇಲಾಖೆ ಕೆಬಿಜೆಎನ್ ಇಲಾಖೆ ಸಾರಿಗೆ ಇಲಾಖೆ ಪೋಲಿಸ್ ಇಲಾಖೆ ಶಿಕ್ಷಣ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.