ಇಂಡಿ

ಗಾಂಧಿ ಜಯಂತಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

ಗಾಂಧಿ ಜಯಂತಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ


ಇಂಡಿ 02 : ಆರ್ ಎಂ ಶಹಾ ಪಬ್ಲಿಕ್ ಶಾಲೆ ಯಲ್ಲಿ ಇಂದು ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜಯಂತಿಯನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳಿಗೆ  ಕಾಲೇಜಿನ ಪ್ರಾಚಾರ್ಯರು ಶ್ರೀಮತಿ ಸುನಿತಾ ಮೇಡಂ ಶಾಲಾ ಪ್ರಾಚಾರ್ಯರು ಶ್ರೀ ಪ್ರಕಾಶ ಪಾಟೀಲ ಪೂಜೆ ಸಲ್ಲಿಸಿದರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಜಗತ್ತಿಗೆ ತೋರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜೀವನ ಹಾಗೂ ಸ್ವಾತಂತ್ರ್ಯ ಹೋರಾಟದ ಕುರಿತು ಮಾತನಾಡಲಾಯಿತು. ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ದೇಶಸೇವೆ ಮಾಡಿದ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳ ಜೀವನ, ದೇಶಭಕ್ತಿ ಮತ್ತು ಕರ್ತವ್ಯನಿಷ್ಠೆಯನ್ನು ಸ್ಮರಿಸಲಾಯಿತು.ಶಿಕ್ಷಕರ ಭಾಷಣ ಮತ್ತು ದೇಶಭಕ್ತಿಗೀತೆಗಳನ್ನು  ಪ್ರಸ್ತುತಪಡಿಸಿದರು. ಇಬ್ಬರು ಮಹನೀಯರ ಆದರ್ಶಗಳನ್ನು  ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಕೊನೆಯಲ್ಲಿ ಎಲ್ಲ  ಸಂಸ್ಥೆಯ ಅಧ್ಯಕ್ಷರಾದ ಡಿ.ಆರ್‌.ಶಹಾ ಹಾಗೂ  ಶಾಲಾ ಕಾಲೇಜು ಶಿಕ್ಷಕರು ಸೇರಿ ರಘುಪತಿ ರಾಘವ ರಾಜಾರಾಮ್ ಭಜನೆ ಹಾಡಿದರು. 


ಸುದ್ದಿ ಓದಿ