ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ರೈತರು
ಇಂಡಿ 02 : ತಾಲ್ಲೂಕಿನ ತಡವಲಗಾ ಗ್ರಾಮದ ಜೋಡಗುಡಿ ಹತ್ತಿರ ಭಾರತೀಯ ಕಿಸಾನ್ ಸಂಘದ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಈಗ ಹೊಸ ತಿರುವು ಪಡೆದುಕೊಂಡಿದೆ.ಇವರಿಗೆ ಧರಣಿ ಸತ್ಯಾಗ್ರಹಕ್ಕೆ ಯಾವುದೇ ರೀತಿಯ ಸ್ಪಂದನೆ ಸಿಗದ ಕಾರಣ ಇಂದಿನಿಂದ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಗುರುನಾಥ ಬಗಲಿ ಹಾಗೂ ಚಂದಪ್ಪ ಜೇಟ್ಟೆಪ್ಪ ಮಿರಗಿ ಅವರು ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗುರುನಾಥ ಬಗಲಿ ಅವರು ಆಮರಣ ಉಪವಾಸ ಸತ್ಯಾಗ್ರಹವು ಶಾಂತಿಯುತ ಪ್ರತಿಭಟನೆಯ ಅತ್ಯುನ್ನತ ಮತ್ತು ಅತ್ಯಂತ ಶಕ್ತಿಶಾಲಿ ರೂಪವಾಗಿದೆ. ತಮ್ಮ ಬೇಡಿಕೆಗಳು ಈಡೇರುವವರೆಗೆ ಅಥವಾ ಪ್ರಾಣ ಹೋಗುವವರೆಗೆ ಯಾವುದೇ ಆಹಾರವನ್ನು ಸೇವಿಸದೆ ಉಪವಾಸ ಮಾಡುವ ಪಣವನ್ನು ನಾನು ತಟ್ಟಿದ್ದೆನೆ.ಇದು ಹಿಂಸೆಗೆ ಆಸ್ಪದ ನೀಡದೆ, ಆತ್ಮಶಕ್ತಿ ಮತ್ತು ಸತ್ಯದ ಮಾರ್ಗದಲ್ಲಿ ಅಹಿಂಸಾತ್ಮಕ ಅಸ್ತ್ರವಾಗ ಮಹಾತ್ಮ ಗಾಂಧೀಜಿಯವರ ಹಾಗೂ ದಕ್ಷ ಪ್ರಾಮಾಣಿಕ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ದಿನವಾದ ಇಂದಿನಿಂದ ಇಂಡಿ ಮತ್ತು ಚಡಚಣ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಬೇಕು ಹಾಗೂ ರೇವಣಸಿದ್ಧೇಶ್ವರ ಏತ ನೀರಾವರಿಯ ಎರಡನೇ ಹಂತದ ಕಾಮಗಾರಿ ಪ್ರಾರಂಬಿಸಬೇಕು ಎಂದು ಆಮರಣ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಾಗಿದೆ ಎಂದು ಗುರುನಾಥ ಬಗಲಿ ಹೇಳಿದರು.ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಉತ್ತರ ಪ್ರಾಂತ ಉಪಾಧ್ಯಕ್ಷರಾದ ಮಲ್ಲನಗೌಡ ಪಾಟೀಲ, ಇಂಡಿ ತಾಲೂಕು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾದ ಈರ್ಪ ಗೋಟ್ಯಾಳ ಸೋಮಶೇಖರ ಬ್ಯಾಳಿ ನಾಗಪ್ಪ ಮಕಣಿ ಚನ್ನಪ್ಪ ಮಿರಗಿ ಅಂಬಣ್ಣ ಪಂತೋಜಿ ದಶಗೀರ ಬಾಗವಾನ ಶರಣಪ್ಪ ತಾರಾಪೂರ ಗಂಗಪ್ಪ ಅಹಿಸಂಗ ಸಿದ್ದು ಸಾಹುಕಾರ ಮೇತ್ರಿ ಅಶೋಕ ಹೊಸಮನಿ ಚಂದ್ರಕಾಂತ ಮೇತ್ರಿ ಬಸವರಾಜ ಪಂತೋಜಿ ಶರಣಪ್ಪ ಸುಧಾಮ ಅಮಸಿದ್ದ ಅಂಗಡಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.