ಅ.3 ರಂದು ತಡವಲಗಾದಲ್ಲಿ ಪ್ರಜಾಸೇವಾ ಅಂದೋಲನ ಕಾರ್ಯಕ್ರಮ
ಇಂಡಿ 01 : ತಾಲೂಕಿನ ತಡವಲಗಾ ಗ್ರಾಮದಲ್ಲಿ ಅಕ್ಟೋಬರ್.3 ರಂದು ಬೆಳಿಗ್ಗೆ ಹತ್ತು ಗಂಟೆಗೆ ತಡವಲಗಾ ಗ್ರಾಮದ ಗ್ರಾಮ ಚಾವಡಿ ಮುಂಬಾಗದ ಅಗಸಿಯ ಆವರಣದಲ್ಲಿ ಪ್ರಜಾ ಸೇವಾ ಅಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ತಿಳಿಸಿದ್ದಾರೆ.ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರು ಸಭೆಯ ಅಧ್ಯಕ್ಷತೆ ವಹಿಸುವರು. ಸಾರ್ವಜನಿಕರು ತಮ್ಮ ಆಧಾರ ಕಾರ್ಡ ಪಡಿತರ ಚೀಟಿಹಾಗೂ ಚುನಾವಣೆ ಗುರುತಿನ ಚೀಟಿ ನಕಲು ಪ್ರತಿಗಳೋಂದಿಗೆ ಆಗಮಿಸಿ ನಿಗದಿತ ಅರ್ಜಿ ನಮೂನೆಯಲ್ಲಿ ಮನವಿ ಸಲ್ಲಿಸಿ ಸಭೆಯ ಸದುಪಯೋಗ ಪಡೆದುಕೊಳ್ಳುವಂತೆ ತಹಸೀಲ್ದಾರರು ತಿಳಿಸಿದ್ದಾರೆ.
ಸಂದ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ,ಮೈತ್ರಿ ಯೋಜನೆ, ರಸ್ತೆ ಸುಧಾರಣೆ, ಬೀದಿ ದೀಪಗಳು, ಗೃಹಜ್ಯೋತಿ, ಗೃಹಲಕ್ಷ್ಮೀ , ಶಕ್ತಿ ಯೋಜನೆ ಅನ್ನಭಾಗ್ಯ ಯುವನಿಧಿ ಸೇರಿದಂತೆ ಸರಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಇರುವ ಸಮಸ್ಯೆಗಳಿಗೂ ಪರಿಹಾರ ಕಂಡು ಕೊಳ್ಳಬಹುದಾಗಿದೆ. ವಸತಿ ಯೋಜನೆ ನಿವೇಶನ ಹಾಗೂ ಮನೆ ಹಂಚಿಕೆ ಹೊಸ ಪಡಿತರ ಚೀಟಿ ಹಾಗೂ ಇತರೆ ಅಭಿವೃದ್ದಿಗೆ ಸಂಬಂದಿಸಿದ ಕುಂದು ಕೊರತೆಗಳನ್ನು ಸಭೆಯಲ್ಲಿ ಸಲ್ಲಿಸಬಹುದು ಎಂದು ಇಂಡಿ ತಹಸೀಲ್ದಾರರಾದ ನಾಗೇಂದ್ರ ಕೊಳಶೆಟ್ಟಿ ಅವರು ತಿಳಿಸಿದ್ದಾರೆ.