ತಾಲೂಕ ಜಿಪಿಟಿ ಶಿಕ್ಷಕರ ಸಂಘಕ್ಕೆ ಶಂಕರ ಕೋಳೆಕರ ಅಧ್ಯಕ್ಷ
ಲೋಕದರ್ಶನ ವರದಿ
ಇಂಡಿ 01: ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026-31 ನೇ ಅವಧಿಗೆ ಇಂಡಿ ತಾಲೂಕ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.ನೂತನ ತಾಲೂಕ ಅಧ್ಯಕ್ಷ-ಶಂಕರಲಿಂಗ ಕೋಳೆಕರ, ಪ್ರಧಾನ ಕಾರ್ಯದರ್ಶಿ-ಪ್ರಭುಲಿಂಗ ಕವಟಗಿ,ಖಜಾಂಚಿ-ಸಿದ್ದರಾಮ ಡಾಬೆ, ಹಿರಿಯ ಉಪಾಧ್ಯಕ್ಷ-ವಿಜಯಕುಮಾರ ಬೇನೂರ, ಹಿರಿಯ ಉಪಾಧ್ಯಕ್ಷೆ-ರೇಣುಕಾ ರೇಬಿನಾಳ, ಉಪಾಧ್ಯಕ್ಷ-ಎನ್ ಸಿ ಪುಠಾಣಿ, ಉಪಾಧ್ಯಕ್ಷೆ-ರೇಶ್ಮಾ ಪವಾರ, ಕಾರ್ಯಾಧ್ಯಕ್ಷ-ಶೇಖರಬಾಬು ಭೀರನಹಳ್ಳಿ, ಮಹಿಳಾ ಕಾರ್ಯಾಧ್ಯಕ್ಷ-ನೇತ್ರಾವತಿ ಕವಟಗಿ, ಸಹ ಕಾರ್ಯದರ್ಶಿ- ಪ್ರಶಾಂತ ಹದರಿ,ವಕ್ತಾರ-ಶಿವಕುಮಾರ ನಾಟೀಕಾರ, ಗೌರವಾಧ್ಯಕ್ಷ-ಜಟ್ಟಪ್ಪ ಮಾದರ, ನಿರ್ದೇಶಕರಾಗಿ ಚಂದ್ರಶೇಖರ ಹಕಾರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಎಸ್ ಬಿ ಕಲ್ಲೋಳ್ಳಿ ತಿಳಿಸಿದ್ದಾರೆ.