ಇಂಡಿ

ನಾದ ಕೆ.ಡಿ. ಶಾಲಾ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ನಾದ ಕೆ.ಡಿ. ಶಾಲಾ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ


ಇಂಡಿ 25: ಸಾಲಿನ ಇನ್ಸ್ಪೈರ್ ಅವಾರ್ಡ್‌ ಯೋಜನೆಯಡಿ ನಡೆದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಇಂಡಿ ತಾಲೂಕಿನ ನಾದ ಕೆ.ಡಿ. ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಕುಮಾರ ಶ್ರೀಧರ ಗಡೆಕಾರ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಶ್ರೀಧರ ಗಡೆಕಾರ ಅವರು ನಿಂಬೆಹಣ್ಣು ಕೀಳುವ ಹಾಗೂ ವಿಂಗಡಿಸುವ ಯಂತ್ರವನ್ನು ತಯಾರಿಸಿ ರಾಜ್ಯಮಟ್ಟದ ಆನ್ಲೈನ್ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಯ ಸಾಧನೆಗೆ ಶಾಲೆಯ ವಿಜ್ಞಾನ ಶಿಕ್ಷಕಿ ಶಶಿಕಲಾ ಬಡಿಗೇರ ಅವರ ಮಾರ್ಗದರ್ಶನ ಹಾಗೂ ಪರಿಶ್ರಮ ಕಾರಣವಾಗಿದೆ.  ಇದೇ ಶಿಕ್ಷಕಿಯ ಮಾರ್ಗದರ್ಶನದಲ್ಲಿ 2020ಹಿ21 ಸಾಲಿನಲ್ಲಿ ವಿದ್ಯಾರ್ಥಿಯೊಬ್ಬರು ‘ಕ್ರಾಪ್ ಕಟ್ಟರ್‌’ ಮಾದರಿ ತಯಾರಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ವಿದ್ಯಾರ್ಥಿ ಶ್ರೀಧರ ಹಾಗೂ ಶಿಕ್ಷಕಿ ಶಶಿಕಲಾ ಬಡಿಗೇರ ಅವರನ್ನು ಶಾಲೆಯ ಮುಖ್ಯಶಿಕ್ಷಕ ಸಿ.ಎಂ. ಬಂಡಗರ ಅಭಿನಂದಿಸಿದ್ದಾರೆ. ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಅಂಕದ ಹಾಗೂ ಸರ್ವ ಸದಸ್ಯರು, ಶಾಲೆಯ ಶಿಕ್ಷಕ ವರ್ಗದವರು ಅಭಿನಂದನೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ