ವಿದ್ಯಾರ್ಥಿಗಳ ಆರೋಗ್ಯಕ್ಕೆ ಮುಖ್ಯ ಆದ್ಯತೆ
ಲೋಕದರ್ಶನ ವರದಿ
ಇಂಡಿ 01: ಇಂಡಿಯ ಆರ್.ಎಂ. ಶಹಾ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಾಗಿ ವೈದ್ಯಕೀಯ ಶಿಬಿರ ಆಯೋಜಿಸಲಾಗಿತ್ತು ಈ ಕಾರ್ಯಕ್ರಮವು ಉತ್ಥಾನ ಗೀತೆಯೊಂದಿಗೆ ಪ್ರಾರಂಭಿಸಲಾಯಿತು.ಆಗಮನಿಸಿದ ಎಲ್ಲಾ ವೈದ್ಯರಿಗೂ ಪುಷ್ಪಗುಚ್ಛ ನೀಡುವುದರ ಮೂಲಕ ಸ್ವಾಗತಿಸಿ, ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ವಿದ್ಯಾರ್ಥಿಗಳ ಆರೋಗ್ಯ ಮತ್ತು ಕ್ಷೇಮಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಶಿಬಿರದಲ್ಲಿ ವಿವಿಧ ಆರೋಗ್ಯ ಸೇವೆಗಳನ್ನು ಒದಗಿಸಲಾಗಿತ್ತು.ಶಿಬಿರದಲ್ಲಿ ದೃಷ್ಟಿ ಪರೀಕ್ಷೆ, ದಂತ ತಜ್ಞರ ಸಲಹೆ, ಹೆಣ್ಣು ಮಕ್ಕಳಿಗೆ ಆರೋಗ್ಯದ ಕುರಿತು ಸ್ತ್ರೀರೋಗ ತಜ್ಞರ ಸಮಾಲೋಚನೆ ಮತ್ತು ಮಕ್ಕಳ ಆರೋಗ್ಯ ಹಾಗೂ ಬೆಳವಣಿಗೆಯ ಮೇಲ್ವಿಚಾರಣೆಗೆ ಮಕ್ಕಳ ವೈದ್ಯರ ಸಲಹೆ ಲಭ್ಯವಾಗುವಂತೆ ಮಹಾರಾಷ್ಟ್ರದ ಪಂಢರಪುರ, ಸೋಲಾಪುರ ಹಾಗೂ ವಿಜಯಪುರ ಇಂಡಿಯ ವಿಶೇಷ ವೈದ್ಯರು ಸ್ಪಂದನಾ ಆಸ್ಪತ್ರೆಯ ವಿಶೇಷ ವೈದ್ಯರ ತಂಡ ಆಗಮಿಸಿ ಸಾಕಷ್ಟು ಮಕ್ಕಳ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿ ಒಳ್ಳೆಯ ಉತ್ತಮ ಸಲಹೆಯನ್ನು ಕೊಡಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಡಿ. ಆರ್. ಶಹಾರವರ ಆಶಯದಂತೆ ವಿದ್ಯಾರ್ಥಿಗಳ ಆರೋಗ್ಯವೇ ನಮ್ಮ ಆದ್ಯತೆ ಎಂಬ ಸಂದೇಶದೊಂದಿಗೆ ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಆರೋಗ್ಯದ ಬಗ್ಗೆ ಜಾಗೃತಿ ಹೊಂದಲು ಹಾಗೂ ಅಗತ್ಯ ಸಲಹೆ ನೀಡಲು ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಮೂಲ ರೂವಾರಿ ಶೈಕ್ಷಣಿಕ ಸಲಹೆಗಾರರು ನಜೀರ್ ಹುಂಡೆಕರ್ ಪ್ರಾಚಾರ್ಯರಾದ ಶ್ರೀ ಪ್ರಕಾಶ್ ಪಾಟೀಲ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸುನಿತಾ ತುಂಬಳ ಉಪ ಪ್ರಾಂಶುಪಾಲರು ಶ್ರೀಮತಿ ಅನಿಶಾ ಮೇಡಂ ಶಾಲಾ ಮುಖ್ಯ ಸಂಯೋಜಕರಾದ ಅಲ್ಲಾಭಕ್ಷ ಉಕ್ಕಲಿ ಶ್ರೀಮತಿ ಜ್ಯೋತಿ ರಾವೂರ ,ಶ್ರೀಮತಿ ಶೃತಿಕಾ ಅಂಬಾರೆ ವೀನೀತ್ ಪಾಟೀಲ್ ಗಂಗಾಧರ್ ಕವಲಗಿ, ಬಸವರಾಜ್ ಹುಣಸಗಿ , ಸಂತೋಷ್ ಪಾಂಡ್ರೆ ,ರಾಮಚಂದ್ರ ಕುಂಬಾರ, ತ್ರಿಮೂರ್ತಿ ಉಡಚಣ ,ಮಲ್ಲಿಕಾರ್ಜುನ್ ಪಾಟೀಲ, ಎನ್.ಸಿ.ಸಿ.ವಿದ್ಯಾರ್ಥಿಗಳು ಶಿಸ್ತು ಬದ್ದಿನಿಂದ ಈ ಕಾರ್ಯಕ್ರಮ ನೆರವೇರಿತು.