ಕಾರವಾರ

ಪ್ರವಾಸಿ ಸ್ಥಳದಲ್ಲಿ ಬಾಟಲಿ ಎಸೆದ ವಿಚಾರಕ್ಕೆ ಯುವಕನ ಮೇಲೆ ಹಲ್ಲೆ

ಪ್ರವಾಸಿ ಸ್ಥಳದಲ್ಲಿ ಬಾಟಲಿ ಎಸೆದ ವಿಚಾರಕ್ಕೆ ಯುವಕನ ಮೇಲೆ ಹಲ್ಲೆ


ಕಾರವಾರ 3: ಪ್ರವಾಸಿ ಸ್ಥಳದಲ್ಲಿ ಬಾಟಲಿಗಳನ್ನು ಎಸೆಯದಂತೆ ಬುದ್ಧಿವಾದ ಹೇಳಿದ್ದಕ್ಕೆ ಯುವಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಕಾರವಾರ ತಾಲ್ಲೂಕಿನ ಚಂಡಿಯಾ ಗ್ರಾಮದ ನಾಗರಮಡಿ ಫಾಲ್ಸ್‌ ಬಳಿ ಶುಕ್ರವಾರ ಸಂಜೆ ನಡೆದಿದೆ.  

ಅಮದಳ್ಳಿ ನಿವಾಸಿ ಇಂದೇಶ್ ಕೊಳಂಬಕರ್ ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶುಕ್ರವಾರ ಸಂಜೆ ಸುಮಾರು 5 ಗಂಟೆಗೆ ಇಂದೇಶ್ ತನ್ನ ಸ್ನೇಹಿತ ಸರ್ವೇಶ್ ಚಿಂಚಣಕರ್ ಅವರೊಂದಿಗೆ ಸ್ಕೂಟರ್ನಲ್ಲಿ ಚಂಡಿಯಾ ನಾಗರಮಡಿ ಫಾಲ್ಸ್ಗ ತೆರಳಿದ್ದರು. ಈ ವೇಳೆ ಧಾರವಾಡದಿಂದ ಬಂದಿದ್ದ ಸುಮಾರು 15 ಜನರ ಗುಂಪು ನೀರಿನಲ್ಲಿ ಬಾಟಲಿಗಳನ್ನು ಎಸೆಯುತ್ತಿರುವುದನ್ನು ಗಮನಿಸಿದ ಇಂದೇಶ್, ‘ಬಾಟಲಿ ಎಸೆಯಬೇಡಿ. ಇದು ಪ್ರವಾಸಿಗರು ಬರುವ ಸ್ಥಳವಾಗಿದ್ದು, ಹೀಗೆ ಮಾಡಬಾರದು’ ಎಂದು ಬುದ್ಧಿವಾದ ಹೇಳಿದ್ದಾರೆ.  

ಇದರಿಂದ ಕುಪಿತಗೊಂಡ ಗುಂಪಿನಲ್ಲಿದ್ದ ಫತೇ ಅಹಮದ್ ಡಂಬಳ, ಮುಸ್ತಫಾ ಮುಕ್ತಮ್, ಶಿರಕೋಳ ಸೇರಿದಂತೆ ಇತರರು ಇಂದೇಶ್ ಜತೆ ವಾಗ್ವಾದ ನಡೆಸಿದ್ದಾರೆ. ಮಾತಿಗೆ ಮಾತು ಬೆಳೆದು ಇಂದೇಶ್ ಮೇಲೆ ಕೈಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಎಲ್ಲರೂ ಸೇರಿಕೊಂಡು ಯುವಕನನ್ನು ಕೆಳಗೆ ಬೀಳಿಸಿ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.  


ಸುದ್ದಿ ಓದಿ