ಕಾರವಾರ

ಅಲೆಯ ಸುಳಿಗೆ ಸಿಲುಕಿದ ಇಬ್ಬರು ಪ್ರವಾಸಿಗರ ರಕ್ಷಣೆ

ಅಲೆಯ ಸುಳಿಗೆ ಸಿಲುಕಿದ ಇಬ್ಬರು ಪ್ರವಾಸಿಗರ ರಕ್ಷಣೆ


ಕಾರವಾರ 03: ಗೋಕರ್ಣದ ಕೂಡ್ಲೆ ಬೀಚ್‌ನಲ್ಲಿ ಸಮುದ್ರದಲ್ಲಿ ಈಜುತ್ತಿದ್ದ ಬೆಂಗಳೂರಿನ ಇಬ್ಬರು ಪ್ರವಾಸಿಗರು ಅಲೆಯ ಸುಳಿಗೆ ಸಿಲುಕಿ ಮುಳುಗುವ ಹಂತದಲ್ಲಿದ್ದಾಗ ಜೀವ ರಕ್ಷಕ ಸಿಬ್ಬಂದಿ ಹಾಗೂ ವಾಟರ್ ಸ್ಪೋರ್ಟ್ಸ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.  ಬೆಂಗಳೂರಿನ ಹರಿಬಾಬು (30) ಹಾಗೂ ಶರವಾನ್ (30) ರಕ್ಷಿಸಲ್ಪಟ್ಟವರು. ಮೂವರು ಸ್ನೇಹಿತರು ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಏಕಾಏಕಿ ಸುಳಿಗೆ ಸಿಲುಕಿದ್ದು, ಹರಿಬಾಬು ಹಾಗೂ ಶರವಾನ್ ದಡದತ್ತ ಈಜಲಾಗದೆ ಅಪಾಯಕ್ಕೆ ಸಿಲುಕಿದ್ದರು.  ಅಪಾಯವನ್ನು ಗಮನಿಸಿದ ಜೀವ ರಕ್ಷಕ ಮಂಜುನಾಥ ಹರಿಕಂತ್ರ ಹಾಗೂ ಜೆಸ್ಕಿ ಚಾಲಕ ಪ್ರಕಾಶ ಲಮಾಣಿ ಸಮುದ್ರಕ್ಕೆ ತೆರಳಿ ಇಬ್ಬರನ್ನೂ ಸುರಕ್ಷಿತವಾಗಿ ದಡಕ್ಕೆ ಕರೆತಂದರು.  ರಕ್ಷಣಾ ಕಾರ್ಯಾಚರಣೆಗೆ ಜೀವ ರಕ್ಷಕ ನಾಗೇಂದ್ರ ಕೂರ್ಲೆ, ಪ್ರವಾಸಿ ಮಿತ್ರ ಸತೀಶ್ ನಾಯಕ್ ಹಾಗೂ ಮೈ ಸ್ಟಿಕ್ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ ಸಿಬ್ಬಂದಿ ಸಹಕರಿಸಿದರು. ಸಮಯೋಚಿತ ಕಾರ್ಯಾಚರಣೆಯಿಂದ ಇಬ್ಬರು ಪ್ರವಾಸಿಗರು ಅಪಾಯದಿಂದ ಪಾರಾಗಿದ್ದಾರೆ. 


ಸುದ್ದಿ ಓದಿ