ಬೆಳಗಾವಿ

ನಾಯಿಗಳಿಗೆ ಕಡ್ಡಾಯವಾಗಿ ರೇಬೀಸ್ ಲಸಿಕೆ ಹಾಕಿಸಬೇಕು

ನಾಯಿಗಳಿಗೆ ಕಡ್ಡಾಯವಾಗಿ ರೇಬೀಸ್ ಲಸಿಕೆ ಹಾಕಿಸಬೇಕು

ಲೋಕದರ್ಶನ ವರದಿ 


ಮೂಡಲಗಿ 08 : ‘ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳಿಗೆ ರೇಬೀಸ್ ಲಸಿಕೆಯನ್ನು ಹಾಕಿಸಿ ಅಪಾಯಕರವಾದ ರೇಬೀಸ್ ಕಾಯಲೆಯಿಂದ ಮುಕ್ತರಾಗಬೇಕು’ ಎಂದು ಪಶು ಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮೋಹನ ಕಮತ ಹೇಳಿದರು.   ಮೂಡಲಗಿ ಪಶು ಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ, ಪಶು ಆಸ್ಪತ್ರೆಯ ಪಾಲಿಕ್ಲಿನಿಕ್  ಹಾಗೂ ಲಯನ್ಸ್‌ ಕ್ಲಬ್ ಮೂಡಲಗಿ ಪರಿವಾರ ಸಹಯೋಗದಲ್ಲಿ ಗುರುವಾರದಂದು ನಾಯಿ, ಬೆಕ್ಕುಗಳಿಗೆ ಉಚಿತ ರೇಬೀಸ್ ಲಸಿಕೆ ಹಾಕುವ ಮತ್ತು ಚಿಕಿತ್ಸೆ ಶಿಬಿರದಲ್ಲಿ ನಾಯಿಗೆ ಲಸಿಕೆ ಹಾಕಿ ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ಪ್ರಾಣಿ ಕಚ್ಚಿದಾಗ ತಕ್ಷಣ ಕಡೆದ ಸ್ಥಳದಲ್ಲಿ ಸಾಬೂನದಿಂದ ಹೆಚ್ಚಿಗೆ ನೀರನ್ನು ಬಳಸಿ ಗಾಯವನ್ನು ಸ್ವಚ್ಚವಾಗಿಸಿಕೊಂಡು ಆಂಟಿಸೆಪ್ಟಿಕ್ ಓಷಧಿ ಹಚ್ಚುವ ಪ್ರಥಮೋಪಚಾರವನ್ನು ಮಾಡಬೇಕು. ನಂತರ ವೈದ್ಯರ ಬಳಿಯಲ್ಲಿ ಕೂಡಲೇ ಚಿಕಿತ್ಸೆ ಪಡೆಯಬೇಕು ಎಂದರು.  ನಾಯಿ, ಬೆಕ್ಕು, ಹಸು, ಎಮ್ಮೆ, ಕುರಿ, ಮೇಕೆ, ಕೋತಿ, ತೋಳ, ನರಿ ಮುಂಗಸಿ, ಕುದರೆ, ಬಾವುಲಿ, ಇಲಿ ಹಾಗೂ ಇತರೆ ಪ್ರಾಣಿಗಳು ಕಚ್ಚಿದಾಗ ಮತ್ತು ನೆಕ್ಕಿದಾಗ ರೇಬೇಸ್ ಹರಡುತ್ತದೆ. ಇದನ್ನು ಯಾರೂ ನಿರ್ಲಕ್ಷ ಮಾಡಬಾರದು ಎಂದರು.  


ಸುದ್ದಿ ಓದಿ