ಚಿಕ್ಕೋಡಿ

ರೈತರ ಬೆಳೆಗಳಿಗೆ ಆಸರೆಯಾದ ಕಾಲುವೆ ನೀರು: ಪ್ರಕಾಶ ಹುಕ್ಕೇರಿ

ರೈತರ ಬೆಳೆಗಳಿಗೆ ಆಸರೆಯಾದ ಕಾಲುವೆ ನೀರು: ಪ್ರಕಾಶ ಹುಕ್ಕೇರಿ


ಚಿಕ್ಕೋಡಿ 08 :  ಮಳೆಯ ಕೊರತೆಯಿಂದ ಬೆಳೆಗಳು ಒಣಗುವ ಆತಂಕದಲ್ಲಿದ್ದ  ಚಿಕ್ಕೋಡಿ ತಾಲೂಕಿನ ಪಶ್ಚಿಮ ಭಾಗದ ರೈತರಿಗೆ ಕಾಲುವೆ ಮೂಲಕ ನೀರು ಹರಿಸಿರುವುದು ನೆಮ್ಮದಿ ತಂದಿದೆ ಎಂದು ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು. ಸಿಬಿಸಿ ಕಾಲುವೆ ಮೂಲಕ ಕೊನೆ ಹಳ್ಳಿಗಳಿಗೆ ನೀರು ತಲುಪುವುದು ಕಷ್ಟಕರವಾಗಿತ್ತು.  

ಕೃಷ್ಣಾ ನದಿಯಿಂದ ಅನ್ನಪೂರ್ಣೇಶ್ವರಿ ಏತ ನೀರಾವರಿ ಯೋಜನೆ ರೂಪಿಸಿ ಕಾಲುವೆಗೆ ನೀರು ತಂದು ಬಿಟ್ಟಿರಿವ ಪರಿಣಾಮ ಚಿಕ್ಕೋಡಿ ತಾಲೂಕಿನ ಖಡಕಲಾಟ, ಸಂಕನವಾಡಿ, ತಪಕರವಾಡಿ, ನವಲಿಹಾಳ ಸೇರಿದಂತೆ ಸುತ್ತಮುತ್ತಲಿನ ರೈತರಿಗೆ ಕಾಲುವೆಗಳಿಗೆ ನೀರು ಹರಿಸಲಾಗಿದೆ ಎಂದರು.ಕಳೆದ ಎಂಟು ದಿನಗಳಿಂದ ಈ ಭಾಗದ ಕಾಲುವೆಗಳಲ್ಲಿ ನೀರು ಹರಿಯುತ್ತಿದ್ದು, ತಂಬಾಕು, ಕಬ್ಬು, ಹೂವು, ಹಣ್ಣು ಹಾಗೂ ತರಕಾರಿ ಸೇರಿದಂತೆ ವಿವಿಧ ಬೆಳೆಗಳಿಗೆ ರೈತರು ನೀರುಣಿಸುತ್ತಿದ್ದಾರೆ. 


ಸುದ್ದಿ ಓದಿ