ಚಿಕ್ಕೋಡಿ

ಕೆ. ಎಲ್‌. ಇ. ಸಂಸ್ಥೆಯ 111ನೇಯ ಸಂಸ್ಥಾಪಣಾ ದಿನಾಚರಣೆ

ಕೆ. ಎಲ್‌. ಇ. ಸಂಸ್ಥೆಯ 111ನೇಯ ಸಂಸ್ಥಾಪಣಾ ದಿನಾಚರಣೆ

ಸಪ್ತ ಋಷಿಗಳು ಶಿಕ್ಷಣದ ಕ್ರಾಂತಿಯ ಹರಿಕಾರರು - ಶ್ರೀ ಯ. ರು. ಪಾಟೀಲ,  

             ಚಿಕ್ಕೋಡಿ 14:  ಕೆ. ಎಲ್‌. ಇ. ಸಂಸ್ಥೆಯ ಸಪ್ತ ಋಷಿಗಳು ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣವಂಚಿತರಾಗಬಾರದೆಂದು ಸತ್ಯ, ಪ್ರೇಮ, ಸೇವೆ, ಸ್ವಾರ್ಥತ್ಯಾಗ ದ್ಯೇಯವಾಕ್ಯದ ಪರಿಕಲ್ಪನೆಯೊಂದಿಗೆ ಸಮಾಜದ ಸರ್ವಜನಾಂಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಶ್ರೇಷ್ಠ ಸಮಾಜ ನಿರ್ಮಾಣ ಮಾಡುವಲ್ಲಿ ಸಪ್ತ ಋಷಿಗಳು ಮಹಾಧಾನಿಗಳು ಕೊಡುಗೆ ಅವಿಸ್ಮರಣೀಯ ಕಾರ್ಯ ಎಂದು  ಚಾರಿತ್ರಿಕ ಕಾದಂಬರಿಕಾರರು ಹಾಗೂ ಬೆಳಗಾವಿಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಯ. ರು. ಪಾಟೀಲ ಹೇಳಿದರು. 

                 111ನೇಯ ಸಂಸ್ಥಾಪನಾ ದಿನಾಚರಣೆಯನ್ನು ಚಿಕ್ಕೋಡಿಯ ಕೆ.ಎಲ್‌.ಇ ಚಿದಾನಂದ ಬ ಕೋರೆ ಬಹುತಾಂತ್ರಿಕ ವಿದ್ಯಾಲಯ ಮತ್ತು ಕೆಎಲ್‌ಇ ಅಂಗಸಂಸ್ಥೆಗಳ ಅಡಿಯಲಿ ಜರುಗಿದ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅವರು 1916ರಲ್ಲಿ ಅಂದಿನ ಕಾಲದಲ್ಲಿ ಉತ್ತರಕರ್ನಾಟಕ ಶಿಕ್ಷಣದಿಂದ ವಂಚಿತವಾಗಿತ್ತು. ಸಮಾಜದ ಎಲ್ಲ ಪ್ರತಿಭೆಗಳನ್ನು ಪೋಷಿಸುವಂತಹ ಶಾಲೆಗಳಿರಲಿಲ್ಲ. ಈ ತಾರತಮ್ಯ ಗಮನಿಸಿ ಸಪ್ತ ಋಷಿಗಳಾದ ಶ್ರೀ ಎಸ್‌ಎಸ್ ಬಸವನಾಳ, ಶ್ರೀ ಎಮ್ ಆರ್ ಸಾಖರೆ, ಶ್ರೀ ಬಿ ಬಿ ಮಮದಾಪೂರ, ಶ್ರೀ ಎಚ್ ಎಫ್ ಕಟ್ಟಿಮನಿ, ಶ್ರೀ ಪಿ ಆರ್ ಚಿಕ್ಕೋಡಿ, ಶ್ರೀ ಬಿ ಎಸ್ ಹಂಚಿನಾಳ, ಶ್ರೀ ವಿ ವಿ ಪಾಟೀಲ, ದಾನಿಗಳಾದ ರಾವ್ ಬಹಾದ್ದೂರ್ ಅರಟಾಳ ರುದ್ರಗೌಡರು,                          ರಾವ್ ಬಹಾದ್ದೂರ್ ಸರದಾರ ವಿ ಜಿ ದೇಸಾಯಿ, ರಾವ್ ಬಹಾದ್ದೂರ್ ವಿ ಎ ಅನಿಗೋಳ, ಮಹಾದಾನಿಗಳಾದ ಶ್ರೀ ಶಿರಸಂಗಿ ಲಿಂಗರಾಜದೇಸಾಯಿ, ಶ್ರೀ ರಾಜಾ ಲಖಮಗೌಡ ಸರ್ ದೇಸಾಯಿ, ಶ್ರೀ ಬಿ ವಿ ಬೂಮರೆಡ್ಡಿ ಮುಂತಾದ ಶ್ರೇಷ್ಠ ಶಿಕ್ಷಣ ಹರಿಕಾರರ ಶ್ರಮ ಮತ್ತು ನಿಸ್ವಾರ್ಥ ಸೇವೆಯಿಂದ ಶೋಷಿತ ವರ್ಗಕ್ಕೆ ಶಿಕ್ಷಣ ಹಾಗೂ ಬದುಕು ಕಟ್ಟಿಕೊಳ್ಳಲು ಈ ಸಂಸ್ಥೆಯನ್ನು ಹುಟ್ಟುಹಾಕಿದರು. ಸಂಸ್ಥೆ ವ್ಯಾಪಾರಿ ಉದ್ಧೇಶಕ್ಕಾಗಿ ಆರಂಭವಾದದ್ದಲ್ಲ, ಬಡಮಕ್ಕಳಿಗೆ ಶಿಕ್ಷಣ ನೀಡುವ ಹಾಗೂ ಕನ್ನಡವನ್ನು ಉಳಿಸುವ ಉದ್ದೇಶದೊಂದಿಗೆ ಸಪ್ತರ್ಷಿಗಳು ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ಎಂಬ ಹೆಸರುಕೊಟ್ಟು ಸ್ಥಾಪಿಸಿದರು.

                  ಸಪ್ತರ್ಷಿಗಳಿಂದ ಬೆಳೆದು ಬಂದ ಈ ಸಂಸ್ಥೆ ಶತಮಾನದ ಬೆಳಕು ಕಂಡಿದ್ದು, ಸಾಧಾರಣ ಮಾತಲ್ಲ. ಹಾಗೂ ಡಾ ಪ್ರಭಾಕರ ಕೋರೆರವರ ಅವಿರತ ಪ್ರಯತ್ನದಿಂದ ಇಂದು ಕೆ ಎಲ್ ಇ ಸಂಸ್ಥೆ ಅಂತರಾಷ್ಟೀಯ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿ ಕೇವಲ ಸಂಸ್ಥೆ ಮಾತ್ರವಲ್ಲದೇ ಸಂಸ್ಥಾನವಾಗಿ ಬೆಳೆದ ಸಂಸ್ಥೆಯಲ್ಲಿ ನಿಸ್ವಾರ್ಥತನದಿಂದ ಪ್ರಾಮಾಣಿಕವಾಗಿ ಕೆಲಸಮಾಡುವ ಮನೋವೃತ್ತಿ ಸಿಬ್ಬಂದಿಯವರಲ್ಲಿದ್ದರೇ ಸಾಕು ಎಂದರು. 

               ಕೆ. ಎಲ್‌. ಇ ಸಂಸ್ಥೆಯ ಚಿಕ್ಕೋಡಿಯ ಆಯುರ್ವೇದ ವೈದ್ಯಕಿಯ ಕಾಲೇಜಿನ ಪ್ರಾಚಾರ್ಯರಾದ          ಡಾ. ಕಿರಣಕುಮಾರ ಮುತ್ನಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯು ಸತ್ಯ, ಪ್ರೇಮ, ಸೇವೆ, ಸ್ವಾರ್ಥತ್ಯಾಗ ಎಂಬ ಧ್ಯೇಯದೊಂದಿಗೆ 30 ವಿದ್ಯಾಥಿಗಳು, 7 ಶಿಕ್ಷಕರಿಂದ ಆರಂಭವಾದ ಈ ಸಂಸ್ಥೆಯು, ಪ್ರಸ್ತುತ 1 ಲಕ್ಷ 48 ಸಾವಿರಕ್ಕೂ ಅಧಿಕ  ವಿದ್ಯಾರ್ಥಿಗಳನ್ನು, 18000 ಕ್ಕೂ ಅಧಿಕ ಶಿಕ್ಷಕರನ್ನು, 320ಕ್ಕೂ ಹೆಚ್ಚು ಅಂಗಸಂಸ್ಥೆಗಳನ್ನು ಹೊಂದಿದೆ. ಡಾ. ಪ್ರಭಾಕರ ಕೋರೆಯವರ ನೇತೃತ್ವದಲ್ಲಿ ಕೆ ಎಲ್ ಇ ಸಂಸ್ಥೆಯು ಶಿಕ್ಷಣ, ಆರೋಗ್ಯ, ಕೃಷಿ, ತಂತ್ರಜ್ಞಾನ, ಆಯುರ್ವೇದ, ಹೋಮಿಯೋಪತಿ ಪ್ರತಿಯೊಂದು ರಂಗದಲ್ಲಿ ಶಿಕ್ಷಣ ಸಂಸ್ಥೆಗಳು ದೇಶದಲ್ಲಿ                                                         ಕಾರ್ಯನಿರ್ವಹಿಸುತ್ತಿರುವುದು ಮಾತ್ರವಲ್ಲದೇ ಅಂತರಾಷ್ಷೀಯ ವಿಶ್ವವಿದ್ಯಾಲಯಗಳ ಜೊತೆ ಒಡಂಬಡಿಕೆ ಮಾಡಿಕೊಂಡಿರುವುದು ನಮ್ಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. 

 ಈ ಸಂದರ್ಭದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗೆ ಭಾಜನರಾಧ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಸಂಸ್ಥೆಯಲ್ಲಿ ಸ್ಮರಣೀಯ ಹೆಚ್ಚು ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ, ಪಿ.ಎಚ್‌.ಡಿ ಹೊಂದಿದ ಶಿಕ್ಷಕರಿಗೆ ಸತ್ಕರಿಸಲಾಯಿತು.  

              ಚಿಕ್ಕೋಡಿಯ ಅಂಗ ಸಂಸ್ಥೆಗಳ ಪ್ರಾಚಾರ್ಯರಾದ ಡಾ. ದರ್ಶನಕುಮಾರ ಬಿಳ್ಳೂರ, ಡಾ. ಸುಧೀರ ಕೋಟಿವಾಲೆ, ಪ್ರೋ. ವಿವೇಕ ಖೋತ, ಪ್ರೋ ವೆಂಕಟರೆಡ್ಡಿ, ಪ್ರೋ. ಪಿ ಬಿ ಪಾಟೀಲ್, ಡಾ. ಸುನೀಲ ಎಮ್ ಬಿ, ಪ್ರೋ. ವರಲಕ್ಷೀ, ಪ್ರೋ. ದೀಪಾಲಿ ಪಾಟೀಲ್, ಡಾ. ಅಮರ ಪಶುಪತಿಮಠ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರೇಯಾ ಪಾವಸೆ ಸ್ವಾಗತಗೀತೆ ಹಾಡಿದರು, ಪ್ರೊ. ಎಮ್ ಬಿ ನಾವಿ ಸ್ವಾಗತಿಸಿದರು, ಪ್ರೋ. ಅನಿತಾ ಸೈಬಣ್ಣವರ ನಿರೂಪಿಸಿದರು. ಡಾ. ಸುಧೀರ ಕೋಟಿವಾಲೆ ಅಥಿತಿಗಳನ್ನು ಪರಿಚಯಿಸಿದರು, ಡಾ. ರವಿ ಮಡಿವಾಳರ ವಂದಿಸಿದರು. 


ಸುದ್ದಿ ಓದಿ