ಶಾಸಕರ ಬರವಶ ಮೆರೆಗೆ ರೈತರ ಆಮರಣ ಉಪವಾಸ ಅಂತ್ಯ
ಶಾಸಕರ ಬರವಶ ಮೆರೆಗೆ ರೈತರ ಆಮರಣ ಉಪವಾಸ ಅಂತ್ಯ
ಲೋಕದರ್ಶನ ವರದಿ
ಇಂಡಿ 04: ತಾಲ್ಲೂಕಿನ ತಡವಲಗಾ ಗ್ರಾಮದ ಜೋಡಗುಡಿ ಹತ್ತಿರ ಭಾರತೀಯ ಕಿಸಾನ್ ಸಂಘದ ವತಿಯಿಂದ ನಡೆಯುತ್ತಿರುವ ಆಮರಣ ಉಪವಾಸ ಸತ್ಯಾಗ್ರಹಕ್ಕೆ ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ತಮ್ಮ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸೇಮೆತವಾಗಿ ಆಮರಣ ಉಪವಾಸ ಸತ್ಯಾಗ್ರಹಕ್ಕೆ ಸ್ಥಳಕ್ಕೆ ಉಪವಾಸ ಕುಳಿತ ಗುರುನಾಥ ಬಗಲಿ ಹಾಗೂ ಚಂದಪ್ಪ ಜೇಟ್ಟೆಪ್ಪ ಮಿರಗಿ ಅವರಿಗೆ ಎಳೆ ನೀರು ಕುಡಿಸುವುದರ ಮೂಲಕ ಹೋರಾಟವನ್ನು ಅಂತ್ಯ ಗೊಳಿಸಿದರು ನಂತರ ಮಾತನಾಡಿದ ಶಾಸಕರು ನಾನು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ಕಮೀಟಿ ಅಧ್ಯಕ್ಷರಾದ ವಿಜಯಾನಂದ ಕಾಸಪ್ಪನವರ ಅವರೊಂದಿಗೆ ಮಾತುಕತೆ ಮಾಡಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಅಭಿಯಂತರಾದ ಬಸವರಾಜ ಅವರನ್ನು ಕರೆದುಕೊಂಡು ಇಲ್ಲಿಗೆ ಬಂದಿದ್ದೇನೆ, ಕೇವಲ ಏಳು ದಿನಗಳ ಒಳಗಾಗಿ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಕೆರೆ ಸೇರಿದಂತೆ ಇಂಡಿ ಹಾಗೂ ಚಡಚಣ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲಾಗುವುದು. ಒಂದು ವೇಳೆ ತುಂಬದ್ದಿರೆ ನಾನೇ ಸ್ವತಾ ಬಂದು ನಿಮ್ಮ ಜೊತೆ ಹೋರಾಟ ಮಾಡುತ್ತೆನೆ.ನನ್ನ ಮೇಲೆ ನಂಬಿಕೆ ಈಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಮಾತನಾಡಿ ಅವರು ಈ ಬಾರಿ ಬೀಕರ ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ. . ಈ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಇಂಡಿ ತಹಶೀಲ್ದಾರ ನಾಗೇಂದ್ರ ಕೊಳಶೆಟ್ಟಿ ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾದೇವಪ್ಪ ಏವೂರ ಇಂಡಿ ಡಿ ವಾಯ್ ಎಸ್ ಪಿ ಸದಾಶಿವ ಕಟ್ಟಿಮನಿ ಹೋರ್ತಿ ಪೋಲಿಸ್ ಪಿಎಸ್‌ಐ ಅನೀತಾ ರಾಠೋಡ ಗ್ರಾಮದ ಮುಖಂಡರಾದ ಬಸವರಾಜ ಇಂಡಿ ಬಾಬುಸಾಹುಕಾರ ಮೇತ್ರಿ ಆನಂದಪ್ಪ ದೇಸಾಯಿ ಸೋಮಶೇಖರ ಬ್ಯಾಳಿ ತಮ್ಮಣ್ಣ ಪೂಜಾರಿ ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಯೋಗಪ್ಪ ಚನಗೊಂಡ ಕಿಸಾನ್ ಸಂಘದ ಉತ್ತರ ಪ್ರಾಂತ ಉಪಾಧ್ಯಕ್ಷರಾದ ಮಲ್ಲನಗೌಡ ಪಾಟೀಲ, ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.