ರಾಷ್ಟ್ರೀಯ

ಸಾರನ್‌ನಲ್ಲಿ ಚಾಕು ದಾಳಿ: ಮೂವರು ಸಾವು, ಓರ್ವ ಗಾಯ

ಸಾರನ್‌ನಲ್ಲಿ ಚಾಕು ದಾಳಿ: ಮೂವರು ಸಾವು, ಓರ್ವ ಗಾಯ

ಸಾರನ್ (ಬಿಹಾರ), ಅ. 4: ಬಿಹಾರದ ಸಾರನ್ ಜಿಲ್ಲೆಯ ಏಕ್ಮಾ ಪೊಲೀಸ್ ಠಾಣಾ ವ್ಯಾಪ್ತಿಯ ಪರ್ಸಾಗಢದಲ್ಲಿ ಕಳೆದ ತಡರಾತ್ರಿ ನಡೆದ ಚಾಕು ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಮೃತರನ್ನು ಜೀರಾಪತಾರ್ ಗ್ರಾಮದ ನಿವಾಸಿ ಮುಕೇಶ್ ಕುಮಾರ್ ಯಾದವ್ (25), ಪಚೋರ್ ಗ್ರಾಮದ ರಮೇಶ್ ಯಾದವ್ (35) ಹಾಗೂ ಅಂಕುರ್ ಕುಮಾರ್ (28) ಎಂದು ಗುರುತಿಸಲಾಗಿದೆ.

ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸಾರನ್ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾರನ್ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಗಾಯಗೊಂಡ ವ್ಯಕ್ತಿಯ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಲು ವಿವಿಧೆಡೆ ದಾಳಿ ನಡೆಸುತ್ತಿದ್ದಾರೆ.

ಚಾಕು ದಾಳಿಗೆ ಕಾರಣವಾದ ಪರಿಸ್ಥಿತಿಗಳು ಹಾಗೂ ಘಟನೆಯಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

ಸುದ್ದಿ ಓದಿ