ಥೈರಾಡ್ ಚಿಕಿತ್ಸೆಗೆ ಎಚ್ ಕೆ ಪಾಟೀಲ್ ವೈದ್ಯಕೀಯ ಸೇವಾ ತಂಡ ನೆರವು
ಬೆಟಗೇರಿ 04 :- ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ಬೆಟಗೇರಿಯ ಮಂಜುನಾಥ್ ನಗರದ ನಿವಾಸಿಗಳಾದ 70 ವರ್ಷ ವಯೋಮಾನದ ಶ್ರೀಮತಿ ತಾರಾಬಾಯಿ ತೀಕೋಟಿ ರವರು ಆರೋಗ್ಯ ಮಾರಕ ಗಂಭೀರ ಥೈರಾಡ್ ರೋಗದಿಂದ ಬಳಳುತ್ತಿದ್ದರು. ಖಾಯಿಲೆಯು ಸಂಪೂರ್ಣ ಗುಣಮುಖವಾಗದಿರುವ ಸ್ಥಿತಿಯಲ್ಲಿರಲು ಗದಗ ನಗರದಲ್ಲಿ ಬಡ ಜನಸಾಮಾನ್ಯರ ಜೀವ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾಕ್ಟರ್ ಎಚ್ ಕೆ ಪಾಟೀಲ್ ಸೇವಾ ತಂಡದ ಅಧ್ಯಕ್ಷರಾದ ಪ್ರಭು ಎಲ್ ಬುರಬುರೆಯವರ ನೇತೃತ್ವದಲ್ಲಿ ಶ್ರೀಮತಿ ತಾರಾಬಾಯಿ ತೀಕೋಟಿಯವರಿಗೆ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಯಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ನೆರವಾಗಿ ಮಾನವೀಯತೆಯನ್ನು ಮೆರೆದು ಯಶಸ್ವಿ ಶಸ್ತ್ರ ಚಿಕಿತ್ಸೆಗೆ ನೆರವಾಗಿರುತ್ತದೆ.
ಆರೋಗ್ಯ ಮಾರಕ ಗಂಭೀರ ಥೈರಾಡ್ ಶಸ್ತ್ರ ಚಿಕಿತ್ಸೆಯನ್ನು ಪಡೆದು ಗುಣಮುಖರಾದ ಪ್ರಯುಕ್ತ ಡಾಕ್ಟರ್ ಎಚ್ ಕೆ ಪಾಟೀಲ್ ಸೇವಾ ತಂಡದ ಅಧ್ಯಕ್ಷರಾದ ಪ್ರಭು ಎಲ್ ಬುರಬುರೆ ಹಾಗೂ ಸೇವಾ ತಂಡದ ಕ್ಯಾಪ್ಟನ್ ಶಿವಪ್ಪ ಬಳ್ಳಾರಿ ರವರನ್ನು ಒಳಗೊಂಡ ನಿಯೋಗವು ಇಂದು ದಿನಾಂಕ 04/10/2026 ರಂದು ಸೇವಾ ತಂಡದ ವತಿಯಿಂದ ನೆರವು ಪಡೆದ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಆರೋಗ್ಯ ಕುಶಲೋಪರಿ ವಿಚಾರಿಸಲಾಯಿತು.
ಈ ಸಂಧರ್ಭದಲ್ಲಿ ಡಾಕ್ಟರ್ ಎಚ್ ಕೆ ಪಾಟೀಲ್ ಸೇವಾ ತಂಡದ ಕ್ಯಾಪ್ಟನರಾದ, ನವೀನ್ ಜಾಲಿಹಾಳ್, ದಾದಾಪೀರ್ ಮುಂಡರಗಿ, ನಾಗರಾಜ್ ಕುರಗೋಡ, ರಾಘವೇಂದ್ರ ಪಾಲನಕರ,ಸಂಜಯ ತೀಕೋಟಿ, ಲಲಿತಾ ಶೀತಲ್, ಜಯಶ್ರೀ ರಜಪೂತ, ನಾರಾಯಣಸಿಂಗ್ ತೀಕೋಟಿ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.