ಬೆಳಗಾವಿ

ಗುರ್ಲಾಪೂರದಲ್ಲಿ ಲಕ್ಷ್ಮೀದೇವಿ ಜಾತ್ರೆ ಪ್ರಾರಂಭ

ಗುರ್ಲಾಪೂರದಲ್ಲಿ ಲಕ್ಷ್ಮೀದೇವಿ ಜಾತ್ರೆ ಪ್ರಾರಂಭ

ಗುರ್ಲಾಪೂರ 4: ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮದ ಆರಾಧ್ಯದೇವರಾದ ಲಕ್ಷ್ಮೀದೇವಿ ಜಾತ್ರೆಯು ದಿ. 6 ರಿಂದ 7 ರ ವರೆಗೆ ಅತೀ ವಿಜೃಂಭಣೆಯಿಂದ ಜರಗುವುದು. ಜಾತ್ರೆಯ ಪ್ರಾರಂಭದಲ್ಲಿ ಗ್ರಾಮದಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಹೀಗೆ ಐದು ವಾರಗಳವರೆಗೆ ಗ್ರಾಮದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಯಾವುದೇ ಕೆಲಸ ಕಾರ್ಯಕ್ಕೆ ಹೋಗದೆ ಸ್ವ-ಪ್ರೇರಿತವಾಗಿ ಯಾವುದೇ ಕೆಲಸದಲ್ಲಿ ತೊಡಗದೆ ಬಂದ್ ಮಾಡಿ ಗ್ರಾಮದಲ್ಲಿರುವ ದೇವರ ಗುಡಿಗಳಿಗಳಿಗೆ ಗ್ರಾಮದಲ್ಲಿ ಯಾವುದೆ ರೂಗ ರೂಜಿನ ಬಾರದಂತೆ ದೇವಿ ನಮ್ಮನು ಕಾಪಾಡಲಿ ಎಂದು ನೀರನ್ನು ಕೊಡಗಳಲ್ಲಿ ತಗೆದುಕೂಂಡು  ದೇವಸ್ಥಾನದ ಆವರಣದಲ್ಲಿ ನೀರು ಹಾಕುವರು. ನಂತರ ಗ್ರಾಮದ ಹಿರಿಯರು ಯುವಕರು ಸೇರಿಕೋಂಡು ದೇವಸ್ಥಾನದ ಅಬಿವೃದ್ದಿ ಕುರಿತು ಚರ್ಚಿಸುವರು ಮತ್ತು ಜಾತ್ರೆಗೆ ಅಂಬಲಿಕಾಳು, ಭಕ್ತರ ಮನೆ ಮನೆಗೆ ಹೋಗಿ ತರುವ ವಾಡಿಕೆ ಮಾಡುವರು.  

ಮಂಗಳವಾರ ದಿ.6 ರಂದು ಮುಂಜಾನೆ ಲಕ್ಷ್ಮೀದೇವಿ ಅಭಿಷೇಕ ಮಾಡಿ ದೇವಿಯ ಉಡಿ ತುಂಬುವುರು, ಸಾಯಂಕಾಲ ಖಾನಟ್ಟಿ ಶಿವಲಿಂಗೇಶ್ವರ ಪಲ್ಲಕ್ಕಿಯನ್ನು  ಭಕ್ತಿಯಿಂದ ಗ್ರಾಮಕ್ಕೆ  ಬರಮಾಡಿಕೊಂಡು ಗ್ರಾಮದ ಸಮಸ್ತ ದೇವರುಗಳ ಒಕ್ಕೋರಲದಿಂದ ಪಲ್ಲಕ್ಕಿ ಉತ್ಸವ ಜರಗುವುದು. ರಾತ್ರಿ 10 ಗಂಟೆಗೆ ಲಕ್ಷ್ಮೀದೇವಿಯ ಆವರಣದಲ್ಲಿ  ಡೊಳ್ಳಿನ ಪದ ಜರಗುವುದು.  ಹಾಗೂ ಜಾತ್ರೆಯಲ್ಲಿ ವಿವಿಧ ಪಂಧ್ಯಾವಳಿಗಳನ್ನು ನಡೆಯುತ್ತವೆ.  


ಸುದ್ದಿ ಓದಿ