ಬೆಳಗಾವಿ

ವಿಶೇಷ ಚೇತನ ಮಕ್ಕಳ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ವಿಶೇಷ ಚೇತನ ಮಕ್ಕಳ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ



ಸವದತ್ತಿ 03 : ಬೆಳಗಾವಿಯಲ್ಲಿ ನಡೆದ 2026- 27 ನೇ ಸಾಲಿನ ವಿಶೇಷ ಮಕ್ಕಳ  ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಪಿ.ಎಂ.ಶ್ರೀ ಆದರ್ಶ ವಿದ್ಯಾಲಯ ಯಡ್ರಾವಿಯ 14 ವರ್ಷದ ಒಳಗಿನ ವಿಭಾಗದಲ್ಲಿ  ಒಂದು ಕೈ ನ್ಯೂನ್ಯತೆಯ ವಿಭಾಗದಲ್ಲಿ ಸದಾನಂದ ಪಕೀರ​‍್ಪ ಶಿಂಗಾಡಿ. ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ,50 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ,ಬಲ್ಲೆ ಎಸೆತದಲ್ಲಿ  ತೃತೀಯ ಸ್ಥಾನ ಪಡೆದಿದ್ದಾರೆ. ಒಂದು ಕಾಲು ನೂನ್ಯತೆಯ ವಿಭಾಗದಲ್ಲಿ  ಕರಿಯಪ್ಪ ಮಾದೇವಪ್ಪ ಉಪ್ಪಾರ್‌. ಬಲ್ಲೆ ಎಸೆತದಲ್ಲಿ ಪ್ರಥಮ ಸ್ಥಾನ ,ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಒಂದು ಕೈ ನ್ಯೂನ್ಯತೆಯ ವಿಭಾಗದಲ್ಲಿ ಸುದೀಪ್ ಮಾರುತಿ ಜಿಟ್ಲಿ. ಬಲ್ಲೆ ಎಸೆತದಲ್ಲಿ ದ್ವಿತೀಯ ಸ್ಥಾನ, ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ,50 ಮೀಟರ್ ಓಟದಲ್ಲಿ ತ್ರತೀಯ ಸ್ಥಾನ ಪಡೆದಿದ್ದಾರೆ .ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಈ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿ ನೀಡಿದ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ  ಜಗದೀಶ್ ತಳವಾರ್ ಅವರಿಗೆ  ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಕ್ಷೇತ್ರ ಸಮನ್ವಯಾಧಿಕಾರಿ ಯರಡ್ಡಿಯವರು,ದೈಹಿಕ ಶಿಕ್ಷಣ ಪರೀಕ್ಷಕರಾದ  ಸಂತೋಷ್ ಬಿರಾಜನವರ್ , ಮುಖ್ಯ ಶಿಕ್ಷಕ ಆರ್ ಎಫ್ ಮಾಗಿ ,ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ ಹಂಪಣ್ಣವರ, ಸಮನ್ವಯ ಶಿಕ್ಷಣ ಶಿಕ್ಷಕರಾದ ಡಾ. ವ?. ಬಿ. ಕಡಕೋಳ, ಡಿಎಲ್ ಭಜಂತ್ರಿ, ಅಭಿನಂದಿಸಿದ್ದಾರೆ. 


ಸುದ್ದಿ ಓದಿ