ಬೆಳಗಾವಿ

ರೈತರಿಗೆ ಪರಿಸರ ಕೃಷಿ ವಿಧಾನಗಳ ಕುರಿತು ಆರು ದಿನಗಳ ತರಬೇತಿ

ರೈತರಿಗೆ ಪರಿಸರ ಕೃಷಿ ವಿಧಾನಗಳ ಕುರಿತು ಆರು ದಿನಗಳ ತರಬೇತಿ

ಲೋಕದರ್ಶನ ವರದಿ 

          ನೇಸರಗಿ 03: ಸಂಜೀವಿನಿ-ಕರ್ನಾಟಕರಾಜ್ಯಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತುಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ, ಬೆಳಗಾವಿ ಮತ್ತು ಐಸಿಎಆರ್‌-ಕೆಎಲ್‌ಇ ಕೃಷಿ ವಿಜ್ಞಾನಕೇಂದ್ರ, ಮತ್ತಿಕೊಪ್ಪ ಇವರ ಸಂಯುಕ್ತಾಶ್ರಯದಲ್ಲಿ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಕೃಷಿ ಸಖಿಯರಿಗೆ ಪರಿಸರ ಕೃಷಿ ವಿಧಾನಗಳ ಕುರಿತು ಆರು ದಿನಗಳ ಮಾಡ್ಯುಲ್‌ಐದರತರಬೇತಿ ಕಾರ್ಯಕ್ರಮವನ್ನು ಮತ್ತಿಕೊಪ್ಪದ ಕೃಷಿ ವಿಜ್ಞಾನಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.   

  ಕೃಷಿಯನ್ನು ಲಾಭದಾಯಕವಾಗಿ ಮಾಡಲು ಹಾಗೂ ರೈತನ ಆದಾಯವನ್ನು ಹೆಚ್ಚಿಸಲು ರೈತರಿಗೆ ತಂತ್ರಜ್ಞಾನದ ಮಾರ್ಗದರ್ಶನ ಮಾಡುವುದು ಅವಶ್ಯಕವಾಗಿದೆ.  ರೈತಕ್ಷೇತ್ರ ಪಾಠಶಾಲೆಯು ಪರಿಣಾಮಕಾರಿಯಾದ ವಿಸ್ತರಣಾ ಪದ್ಧತಿಯಾಗಿದ್ದು, ಈ ಪದ್ಧತಿಯನ್ನು ಕೃಷಿ ಸಖಿಯರುಕ್ಷೇತ್ರ ಮಟ್ಟದಲ್ಲಿ ಅಳವಡಿಸುವಂತೆ ಕೃಷಿ ತಂತ್ರಜ್ಞಾನಗಳನ್ನು ತ್ವರಿತವಾಗಿ ಹಾಗೂ ಸುಲಭವಾಗಿ ರೈತರಿಗೆ ತಲುಪಿಸುವಲ್ಲಿ ಯಶಸ್ವಿಯಾಗಬೇಕೆಂದು ಸಲಹೆ ನೀಡಿದರು.

        ಕೃಷಿ ಸಖಿಯರುರೈತರು ಮತ್ತು ಕೃಷಿ ವಿಜ್ಞಾನಕೇಂದ್ರ ಹಾಗೂ ಕೃಷಿಗೆ ಸಂಬಂಧಿಸಿದ ಇಲಾಖೆಗಳ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸುವರುಎಂದು ವಿವರಿಸಿದರು. ಕಾರ್ಯಕ್ರಮದ ಸಮಾರೋಪ ಹಾಗೂ ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಕೇಂದ್ರದ ವಿಜ್ಞಾನಿಗಳಾದ  ಡಾ. ಎಸ್‌. ಎಸ್‌. ಹಿರೇಮಠ, ಜಿ. ಬಿ. ವಿಶ್ವನಾಥ, ಡಾ. ಭಾವಿನಿ ಪಾಟೀಲ ಹಾಗೂ ಡಾ. ಗುರುರಾಜಕೌಜಲಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೃಷಿ ಸಖಿಯರು ಸ್ವಾಗತಿಸಿ ನಿರೂಪಿಸಿದರು. 


ಸುದ್ದಿ ಓದಿ