ಕಾರವಾರ

ಉತ್ತರ ಕನ್ನಡದಲ್ಲಿ ಮಳೆ ಕೊರತೆ: ಶೇ.25ಕ್ಕೆ ತೀವ್ರ ಇಳಿಕೆ

ಉತ್ತರ ಕನ್ನಡದಲ್ಲಿ ಮಳೆ ಕೊರತೆ: ಶೇ.25ಕ್ಕೆ ತೀವ್ರ ಇಳಿಕೆ


ಕಾರವಾರ 03 :  ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಶೇ.25ರಷ್ಟು ಮಳೆ ಕೊರತೆ ಉಂಟಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ.  

ದಶಕದ ಹಿಂದೆ ಜಿಲ್ಲೆಯಲ್ಲಿ ಸರಾಸರಿ 3,000 ಮಿ.ಮೀ. ಮಳೆಯಾಗುತ್ತಿತ್ತು. 2026ರಲ್ಲಿ ಜೂನ್ನಿಂದ ಸೆಪ್ಟೆಂಬರ್ವರೆಗೆ ವಾಡಿಕೆಯಂತೆ 2,646 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಮುಂಗಾರು ಅವಧಿಯಲ್ಲಿ ಕೇವಲ 1,981 ಮಿ.ಮೀ. ಮಳೆಯಾಗಿದೆ. ಪರಿಣಾಮ ಭತ್ತದ ಇಳುವರಿ ಶೇ.50ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಪಂಪ್ಸೆಟ್ ಆಧಾರಿತ ಕಬ್ಬು ಬೆಳೆಯ ಇಳುವರಿಯೂ ಸ್ವಲ್ಪ ಮಟ್ಟಿಗೆ ಕುಸಿದಿದೆ. ಮೆಕ್ಕೆಜೋಳದ ಫಸಲಿನ ಮೇಲೂ ಮಳೆ ಕೊರತೆ ಪರಿಣಾಮ ಬೀರಿದೆ.  

ಮಳೆ ಕೊರತೆಯಿಂದ ಹಳಿಯಾಳ, ಮುಂಡಗೋಡ, ಯಲ್ಲಾಪುರ ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಉಂಟಾಗಿದೆ. ಜಿಲ್ಲೆಯಲ್ಲಿ 58,546 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, 57,380 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಮಳೆ ಕೊರತೆಯಿಂದ ಬಿತ್ತನೆಯಾದ ಪ್ರದೇಶವೂ ಸಂಕಷ್ಟಕ್ಕೆ ಸಿಲುಕಿದೆ.  

ಮುಂಗಾರು ಮುಗಿದಿದ್ದು, ಹಿಂಗಾರು ಮಳೆಯ ನೀರೀಕ್ಷೆ ರೈತರಲ್ಲಿದೆ. ಮುಂಗಾರು ಮಳೆ ಕೊರತೆಯಿಂದ ಉಂಟಾದ ನಷ್ಟವನ್ನು ಹಿಂಗಾರು ಮಳೆ ಸರಿದೂಗಿಸದಿದ್ದರೆ ರೈತರ ಸಂಕಷ್ಟ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ 1,166 ಹೆಕ್ಟೇರ್ ಭೂಮಿಗೆ ಬೀಜವೇ ಬಿತ್ತಲಾಗಿಲ್ಲ. ಇದರಿಂದಾಗಿ ಬೆಳೆ ನಷ್ಟದ ಪ್ರಮಾಣ ಹೆಚ್ಚಾಗುವ ಆತಂಕ ಎದುರಾಗಿದೆ. ಸೆಪ್ಟೆಂಬರ್ನಲ್ಲಿ ಮಳೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿರುವುದು ರೈತರಿಗೆ ಮತ್ತೊಂದು ಹೊಡೆತ ನೀಡಿದೆ. 


ಸುದ್ದಿ ಓದಿ