ಬೆಳಗಾವಿ

ಶಾಸಕರ ಫಿಟ್ನೆಸ್ ಲುಕ್ ವೈರಲ್; ಯುವಜನರಿಂದ ಮೆಚ್ಚುಗೆ

ಶಾಸಕರ ಫಿಟ್ನೆಸ್ ಲುಕ್ ವೈರಲ್; ಯುವಜನರಿಂದ ಮೆಚ್ಚುಗೆ


ಸವದತ್ತಿ 03 : ಜನ ಸೇವೆಯ ಜೊತೆಗೆ ಆರೋಗ್ಯ ಮತ್ತು ಫಿಟ್ನೆಸ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಶಾಸಕ ವಿಶ್ವಾಸ ವೈದ್ಯ ಅವರ ನೂತನ ಫಿಟ್ನೆಸ್ ಲುಕ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಸಾರ್ವಜನಿಕ ವಲಯ ಹಾಗೂ ಯುವ ಜನತೆಯಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.ಯಾವುದೇ ಶಾರ್ಟ್ಕಟ್ಗಳಿಲ್ಲದೆ, ಕಠಿಣ ಪರಿಶ್ರಮ, ಕಟ್ಟುನಿಟ್ಟಿನ ಶಿಸ್ತು ಮತ್ತು ಪರಿಶುದ್ಧ ಧ್ಯೇಯದಿಂದ ತಮ್ಮ ದೇಹವನ್ನು ಸದೃಢವಾಗಿ ಬದಲಾಯಿಸಿಕೊಂಡಿರುವ ಅವರ ಈ ಹೊಸ ರೂಪಾಂತರದ ಫೋಟೋಗಳನ್ನು ಅಭಿಮಾನಿಗಳು ಹಾಗೂ ಹಿತೈಷಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೇವಲ ದೃಢಸಂಕಲ್ಪ ಮತ್ತು ಶಿಸ್ತು ಮಾತ್ರ ಮುಖ್ಯ ಎಂಬ ಸ್ಪಷ್ಟ ಸಂದೇಶವನ್ನು ಸಾರಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ತಮ್ಮ ಬದುಕಿನಲ್ಲಿ ಸಾಬೀತುಪಡಿಸಿರುವ ಇವರ ಈ ಬದಲಾವಣೆಯು ತಾಲೂಕಿನ ಯುವಕರಲ್ಲಿ ಹಾಗೂ ಫಿಟ್ನೆಸ್ ಪ್ರಿಯರಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ. ಕ್ಷೇತ್ರದ ಜನತೆ, ಹಿತೈಷಿಗಳು ಹಾಗೂ ಅಭಿಮಾನಿಗಳು ತಮ್ಮ ನೆಚ್ಚಿನ ಶಾಸಕರ ಈ ನೂತನ ಫಿಟ್ನೆಸ್ ಲುಕ್ಗೆ ಹರ್ಷ ವ್ಯಕ್ತಪಡಿಸುವುದರೊಂದಿಗೆ, ಅವರ ಮುಂದಿನ ಜನಪರ ಕೆಲಸಗಳಿಗೆ ಹಾಗೂ ಆರೋಗ್ಯಪೂರ್ಣ ಜೀವನಕ್ಕೆ ಹೃತ್ಪೂರ್ವಕ ಶುಭ ಹಾರೈಸಿದ್ದಾರೆ. 


ಸುದ್ದಿ ಓದಿ