ಕೊಪ್ಪಳ

ಯಲ್ಬುರ್ಗಾ- ಬೇವುರ ರಸ್ತೆ ದುರಸ್ತಿಗೆ ಮೆಹಬೂಬ್ ಖಾನ್ ಆಗ್ರಹ

ಯಲ್ಬುರ್ಗಾ- ಬೇವುರ ರಸ್ತೆ ದುರಸ್ತಿಗೆ ಮೆಹಬೂಬ್ ಖಾನ್ ಆಗ್ರಹ


ಕೊಪ್ಪಳ 03:  ಜಿಲ್ಲೆಯ ತಾಲೂಕಿನ ಬೇವೂರು ರಸ್ತೆ ತೀವ್ರವಾಗಿ ಹ ದಗೆಟ್ಟಿದ್ದು ಸದರಿ ಯಲ್ಬುರ್ಗಾ ಬೇವುರ ರಸ್ತೆ ಮೂಲಕ ಸಂಚರಿಸುವ ವಾಹನಗಳಿಗೆ ಸಾರ್ವಜನಿಕ ಗ್ರಾಮಸ್ಥರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು ಕೂಡಲೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಬಿಎಸ್ಪಿ ಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿರುವ ಮೆಹಬೂಬ್ ಖಾನ್ ರವರು ಆಗ್ರಹಪಡಿಸಿದ್ದಾರೆ, ಈ ಕುರಿತು ಹೇಳಿಕೆ ನೀಡಿದ ಅವರು ಯಲಬುರ್ಗಾ ಕ್ಷೇತ್ರದ ಶಾಸಕರು ಉನ್ನತ ಶಿಕ್ಷಣ ಇಲಾಖೆಯ ಸಚಿವರಾಗಿರುವ ಬಸವರಾಜ ರಾಯರೆಡ್ಡಿ ಅವರ ಕ್ಷೇತ್ರದಲ್ಲಿ ರಸ್ತೆ ಹದ್ದಗಟ್ಟಿದೆ ಎಂದರೆ ನಗ ಬೇಕು ಅಥವಾ ಅಳಬೇಕು ಎಂಬುವುದು ತಿಳಿಯದಂತಾಗಿದೆ, ಇಡೀ ಕ್ಷೇತ್ರ ಮಾದರಿಯಾಗಿ ಮಾಡಿದ್ದೇನೆ ಎಂದು ಹೇಳುತ್ತಿರುವ  ಸಚಿವ ಬಸವರಾಜ ರಾಯರೆಡ್ಡಿ ಅವರು ಯಲಬುರ್ಗಾ ಬೇವೂರು  ರಸ್ತೆ ಮೂಲಕ ಸಂಚರಿಸಿಲ್ಲವೇ ಅವರಿಗೆ ಈ ರಸ್ತೆ ಹದ್ದಗೆಟ್ಟಿರುವುದು ಗೊತ್ತಿಲ್ಲವೇ ಎಂಬುದು ಯಕ್ಷ ಪ್ರಶ್ನೆಯಾಗಿದೆ ಕೂಡಲೇ ಯಲಬುರ್ಗಾ ಬೇವೂರು  ರಸ್ತೆ ಡಾಂಬರಿಕರಣ ಮಾಡಬೇಕು ಇಲ್ಲವಾದಲ್ಲಿ ಸಚಿವರ ಮನೆ ಮುಂದೆ ಅಥವಾ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಬಿ ಎಸ್ ಪಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಮಹಬೂಬ್ ಖಾನ್ ಒತ್ತಾಯಿಸಿದ್ದಾರೆ, 


ಸುದ್ದಿ ಓದಿ