ಸುರಭಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಕ್ಲಬ್ ವತಿಯಿಂದ ದಿನಸಿ, ಸೀರೆ, ಪಾತ್ರೆ ವಿತರಣೆ
ಕೊಪ್ಪಳ 02: ಮಾನವೀಯ ಸೇವೆಯ ಮೂಲಕ ಗುರುತಿಸಿಕೊಂಡಿರುವ ಇನ್ನರ್ ವೀಲ್ ಕ್ಲಬ್ ಆಫ್ ಕೊಪ್ಪಳ, ಡಿಸ್ಟ್ರಿಕ್ಟ್ 316 ವತಿಯಿಂದ ನಗರದ ಸುರಭಿ ವೃದ್ಧಾಶ್ರಮದಲ್ಲಿ ವಾಸವಾಗಿರುವ ಹಿರಿಯ ನಾಗರಿಕರಿಗೆ ಅಗತ್ಯ ವಸ್ತುಗಳ ವಿತರಣಾ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು.ಕ್ಲಬ್ ಅಧ್ಯಕ್ಷೆ ಮೀನಾಕ್ಷಿ ಸಿ.ಬಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯರಿಗೆ ಸೀರೆಗಳು, ಟವೆಲ್, ಕಂಬಳಿ*ಗಳನ್ನು ಸ್ವತಃ ಕ್ಲಬ್ಬಿನ ಅಧ್ಯಕ್ಷರು ವಿತರಿಸಿದರು.
ನಂತರ ಕ್ಲಬ್ ನ ಪದಾಧಿಕಾರಿಗಳು ಮತ್ತು ಸದಸ್ಯರು ಹಿರಿಯ ನಾಗರಿಕರಿಗೆ ಹಣ್ಣುಗಳು, ತರಕಾರಿಗಳು, ಅಕ್ಕಿ, ಬಿಸ್ಕೆಟ್, ದಿನಸಿ ಪದಾರ್ಥಗಳು ಮತ್ತು ಅಡುಗೆ ಪಾತ್ರೆ (ವೇಸಲ್ಸ್) ಗಳನ್ನು ವಿತರಿಸಿದರು.ವೃದ್ಧಾಶ್ರಮದಲ್ಲಿ ಸುಮಾರು 15ಕ್ಕೂ ಹೆಚ್ಚು ಹಿರಿಯ ತಾಯಂದಿರು ವಾಸವಾಗಿದ್ದು, ಅವರಿಗೆ ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ ಮತ್ತು ತರಕಾರಿಗಳನ್ನು ನೀಡಲಾಯಿತು. ಕೇವಲ ವಸ್ತು ವಿತರಣೆ ಮಾತ್ರವಲ್ಲದೆ, ವೃದ್ಧರೊಂದಿಗೆ ಆತ್ಮೀಯವಾಗಿ ಬೆರೆತು, ಅವರ ಯೋಗಕ್ಷೇಮ ವಿಚಾರಿಸಿ, ಅವರೊಂದಿಗೆ ಹಾಡು ಹೇಳಿ, ನೃತ್ಯ ಮಾಡಿ ಅವರ ದಿನವನ್ನು ಸ್ಮರಣೀಯವಾಗಿಸಲಾಯಿತು. ವೃದ್ಧರ ಮುಖದಲ್ಲಿ ಮೂಡಿದ ನಗು ಕಾರ್ಯಕ್ರಮಕ್ಕೆ ಸಾರ್ಥಕತೆ ತಂದಿತು.
2026-27 ನೇ ಸಾಲಿನ ಅಂತರಾಷ್ಟ್ರೀಯ ಥೀಮ್ ಗ್ರೋ ಅಂಡ್ ಫ್ಲೋರಿಶ್ ಅಡಿಯಲ್ಲಿ ಈ ಸೇವಾ ಚಟುವಟಿಕೆ ಹಮ್ಮಿಕೊಳ್ಳಲಾಗಿದ್ದು, ಹಿರಿಯ ನಾಗರಿಕರ ಸೇವೆಯೇ ದೇವರ ಸೇವೆ ಎಂದು ಅಧ್ಯಕ್ಷೆ ಮೀನಾಕ್ಷಿ ಸಿ ,ಬಿ , ರವರು ತಿಳಿಸಿದರು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀದೇವಿ ಎಸ್. ಪಾಟೀಲ್, ಶೋಭಾ ,, ಮಾಲಾ, ರತ್ನಾ* ಸೇರಿದಂತೆ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಆಶ್ರಮದ ವ್ಯವಸ್ಥಾಪಕರು ಕ್ಲಬ್ ನ ಈ ನಿರಂತರ ಸೇವೆಯನ್ನು ಶ್ಲಾಘಿಸಿ, ಕೃತಜ್ಞತೆ ಅರ್ಿಸಿದರು,