ಅಕ್ಟೋಬರ್ 5 ರಂದು ಪಟ್ಟಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯಂದ್ರ ಭೇಟಿ
ಬ್ಯಾಡಗಿ. 02: ಪ್ರಧಾನಿ ನರೆಂದ್ರ ಮೋದಿಜಿಯವರ 25 ವರ್ಷಗಳ ಸಾರ್ವಜನಿಕ ಸೇವೆಯ ಹಿನ್ನೆಲೆಯ ನಿಮಿತ್ತ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ಪ್ರತಿ ಬೂತ್ ನಲ್ಲಿ ರಾಜ್ಯಾದ್ಯಂತ ಪ್ರತಿ ಜಿಲ್ಲೆಯ ಎರಡು ತಾಲೂಕಿನಲ್ಲಿ ಸೇವಾ ಸಂಕಲ್ಪ ಯಾತ್ರೆ ಕೈಗೊಂಡಿದ್ದು ನಾಳೆ ದಿ.05/10/26. ರ ಸೋಮವಾರ ದಿವಸ ಸಂಜೆ ನಾಲ್ಕು ಘಂಟೆಗೆ ಬ್ಯಾಡಗಿ ಪಟ್ಟಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗಮಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮಾತನಾಡಿದ ಅವರು ಮಾನ್ಯ ರಾಜ್ಯಾಧ್ಯಕ್ಷರು ಅಂದು ಬ್ಯಾಡಗಿ ನಗರದಲ್ಲಿ ಶ್ರೀ ದಾನಮ್ಮ ದೇವಸ್ಥಾನದಿಂದ ಸಿದ್ದೇಶ್ವರ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ನಡೆಯಲಿದೆ ನಂತರ ಪೌರಕಾರ್ಮಿಕರಿಗೆ ಆರೋಗ್ಯಕ್ಕೆ ಕಿಟ್ ವಿತರಣೆ ನಂತರ ಗಿಡ ನೆಡುವ ಕಾರ್ಯಕ್ರಮ ರಂಗೋಲಿ ಸ್ಪರ್ಧೆ ಭಾಷಣ ಸ್ಪರ್ಧೆ ನಡೆಯಲಿದೆ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.