ಸ.ಮಾ.ಪ್ರಾ. ಶಾಲೆ ನಂ2 ರಲ್ಲಿ ಗಾಂಧಿ, ಶಾಸ್ತ್ರಿಜಿ, ಜಯಂತಿ ಆಚರಣೆ ವಿದ್ಯಾರ್ಥಿಗಳಿಗೆ ಸೊ -ಸಾಕ್ಸ ವಿತರಣೆ
ಲಕ್ಷ್ಮೇಶ್ವರ "ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನಂ 2 ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜನ್ಮದಿನವನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಅವರ ಜಯಂತಿಯನ್ನು ಆಚರಣೆ ಮಾಡಿ ಶಾಲೆಯ ವಿದ್ಯಾರ್ಥಿಗಳಿಗೆ ಸೋ - ಸಾಕ್ಸ್ ವಿತರಣೆ ಮಾಡಲಾಯಿತು
ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಜನ್ಮದಿನಾಚರಣೆ ಮತ್ತು ವಿದ್ಯಾರ್ಥಿಗಳಿಗೆ ಸೊ ಮತ್ತು ಸಾಕ್ಸ್ ವಿತರಣೆ ಮಾಡಿ ಮಾತನಾಡಿದ ಶಾಲೆಯ ಪ್ರಧಾನ ಗುರುಮಾತೆ ಎಸ್ ಎಚ್ ಉಮಚಗಿ ಅವರು
ಮಹಾತ್ಮ ಗಾಂಧೀಜಿಯವರ
ಸತ್ಯ ಮತ್ತು ಅಹಿಂಸೆ: ಜೀವನದಲ್ಲಿ ಯಾವಾಗಲೂ ಸತ್ಯವನ್ನು ನುಡಿಯಿರಿ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿ. ಸರಳತೆ ನಿಮ್ಮ ಸರಳ ಜೀವನವೇ ನಿಮ್ಮ ನೈತಿಕ ಸಂದೇಶವಾಗಲಿ ಎಂದು ಗಾಂಧೀಜಿಯವರು ಸರಳ ಜೀವನ ಮತ್ತು ಉನ್ನತ ಚಿಂತನೆಗೆ ಒತ್ತು ನೀಡಿದರು ಸ್ವಾವಲಂಬನೆ ಸ್ವದೇಶಿ ವಸ್ತುಗಳ ಬಳಕೆ ಮತ್ತು ಗ್ರಾಮ ಸ್ವರಾಜ್ಯದ ಮೂಲಕ ದೇಶವನ್ನು ಬಲಪಡಿಸುವುದು ಅವರ ಉದ್ದೇಶವಾಗಿತ್ತು.
ಅದರಂತೆ ಮಾಜಿ ಉಪ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಂದೇಶಗಳು
ಜೈ ಜವಾನ್, ಜೈ ಕಿಸಾನ್ ಸೈನಿಕರ ದೇಶಭಕ್ತಿ ಮತ್ತು ರೈತರ ಪರಿಶ್ರಮವೇ ದೇಶದ ಮೂಲಸ್ತಂಭ ಎಂದು ಸಾರಿದರು.ಪ್ರಾಮಾಣಿಕತೆ ಮತ್ತು ನಿಷ್ಠೆ ಕಷ್ಟದ ಪರಿಸ್ಥಿತಿಯಲ್ಲೂ ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಸೇವೆ ಬಿಡಬಾರದು ಎಂಬ ಆದರ್ಶ ತೋರಿದರು.
ಸರಳ ಸಜ್ಜನಿಕೆ ದೇಶದ ಅತ್ಯಂತ ಸರಳ ಜೀವನ ನಡೆಸಿದರು ಅಂತ ಮಹಾ ದೇಶಪ್ರೇಮಿಗಳ ಜನ್ಮದಿನದ ಜಯಂತಿಯನ್ನು ಆಚರಿಸುವುದರೊಂದಿಗೆ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅಳವಡಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡು ವುದರೊಂದಿಗೆ ಉನ್ನತ ಪ್ರಜೆಯಾಗಿ ಬಾಳಬೇಕು ಎಂದರು.
ಈ ಸಮಯದಲ್ಲಿ ಶಾಲೆಯ ಶಿಕ್ಷಕಿಯರಾದ ಎಸ ಎಸ ಜಿರಂಕಳಿ ಕೆಆರ್ ಮುದಕಣ್ಣವರ ಪಿ ಎಸ ಹವಾಲ್ದಾರ್ ಎಲ್ಎಮ್ ದುಂಡಪ್ಪನವರ ಎನ್ಎಸ್ ಬಂಕಾಪುರ ಪಿಎಂ ಅಡ್ನೂರ ಪಿಎಫ್ ಪಾಟೀಲ್ ಭಾಗ್ಯಶ್ರೀ ಪೂಜಾರ್ ಪೂರ್ಣಿಮಾ ಆದಿ ಶಾಂಭವಿ ಅಕ್ಕೂರ ಮಮತಾಜ ಸೊರಟೂರ ತೇಜಸ್ವಿನಿ ಅಂಕಲಕೋಟಿ ಆಯಾ ಶೋಭಾ ಶೃತಿ ಸೇರಿದಂತೆ ಶಾಲೆ ಎಲ್ಲ ವಿದ್ಯಾರ್ಥಿಗಳು ಇದ್ದರು