ಹಾನಗಲ್ ಕುಮಾರ ಶಿವಯೋಗಿಗಳ ಕೊಡುಗೆ ಅಪಾರ
ಲೋಕದರ್ಶನ ವರದಿ
ಗದಗ, ಅ.2: ನಾಡಿನ ಸಾವಿರಾರು ಮಠಾಧೀಶರು, ಸಂಗೀತಗಾರರು, ಪ್ರವಚನಕಾರರು ಹಾಗೂ ಮಠ-ಮಾನ್ಯಗಳಿಗೆ ಸಾಮಾಜಿಕ ಕೊಡುಗೆ ನೀಡುವ ಮೂಲಕ ನೆಲ-ಜಲ ಪಾವನಗೊಳಿಸಿದ ಮಹನೀಯರಲ್ಲಿ ಹಾನಗಲ್ ಕುಮಾರ ಶಿವಯೋಗಿಗಳ ಕೊಡುಗೆ ಅಪಾರವಾಗಿದೆ ಎಂದು ಹಾಲಕೆರೆಯ ಪೂಜ್ಯಶ್ರೀ ಜ. ಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.
ನಗರದ ಜ. ಕೊಟ್ಟೂರು ಸ್ವಾಮಿಮಠದ ಅನುಭವ ಮಂಟಪದಲ್ಲಿ ಹರಳಾಪುರದ ಶ್ರೀ ಬಸವಾನಂದ ಸಾಂಸ್ಕೃತಿಕ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಡಾ. ಸಂಗನಬಸವ ಮಹಾಸ್ವಾಮಿಗಳ 88ನೇ ಜಯಂತ್ಯೋತ್ಸವ ಹಾಗೂ ಹಾನಗಲ್ ಗುರು ಕುಮಾರ ಶಿವಯೋಗಿಗಳ 159ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಾನಗಲ್ ಕುಮಾರ ಶಿವಯೋಗಿಗಳ ಕಂಚಿನ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ ಆಶೀರ್ವಚನ ನೀಡಿದ ಅವರು, ಕುಮಾರ ಶಿವಯೋಗಿಗಳ ಸೇವೆ, ತ್ಯಾಗ ಹಾಗೂ ಸಮಾಜಮುಖಿ ಕಾರ್ಯಗಳು ಇಂದಿಗೂ ಸ್ಫೂರ್ತಿದಾಯಕವಾಗಿವೆ ಎಂದರು.