ಗದಗ

ಬೆಟಗೇರಿಯಲ್ಲಿ ಗಾಂಧೀಜಿ ಹಾಗೂ ಲಾಲ ಬಹದ್ದೂರ ಶಾಸ್ತ್ರೀಜಿಯವರ ಜಯಂತಿ ಅರ್ಥಪೂರ್ಣವಾಗಿ ಆಚರಣೆ

ಬೆಟಗೇರಿಯಲ್ಲಿ ಗಾಂಧೀಜಿ ಹಾಗೂ ಲಾಲ ಬಹದ್ದೂರ ಶಾಸ್ತ್ರೀಜಿಯವರ ಜಯಂತಿ ಅರ್ಥಪೂರ್ಣವಾಗಿ ಆಚರಣೆ

ಲೋಕದರ್ಶನ ವರದಿ 

ಬೆಟಗೇರಿ 02 : ಬೆಟಗೇರಿ ರಾಜ್ಯೋತ್ಸವ ಸಮಿತಿ, ಶಾಲಾ ಶಿಕ್ಷಣ ಇಲಾಖೆ, ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆ ಹಾಗೂ ಇಲ್ಲಿಯ ಸಾರ್ವಜನಿಕರ ಸಂಯುಕ್ತ ಆಶ್ರಯದಲ್ಲಿ ಬೆಟಗೇರಿ ಹೊಸಪೇಟೆ ಚೌಕದಲ್ಲಿರುವ ಮಹಾತ್ಮಾ ಗಾಂಧೀಜಿಯವರ ಗುಡಿ ಆವರಣದಲ್ಲಿ ಶ್ರೀ ಎಚ್‌.ವಿ.ಮಳಲಿ ಹಾಗೂ ಸಂಗಡಿಗರಿಂದ ಪ್ರಾರ್ಥನಾ ಸಭೆ ಜರುಗಿತು.

ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ವಿ. ಶೆಟ್ಟಪ್ಪನವರ ಪ್ರಾರಂಭದಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಪ್ರಾರ್ಥನಾ ಸಭೆಯ ನಂತರ ವಿದ್ಯಾರ್ಥಿನಿಯರಿಂದ ಭಗವದ್ಗೀತೆ, ಬೈಬಲ್ ಹಾಗೂ ಕುರಾನ ಪಠಣ ನೆರವೇರಿತು.  

ಪ್ರಾರಂಭದಲ್ಲಿ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಸ್ವಾಗತಿಸಿ ಕೊನೆಗೆ ವಂದಿಸಿದರು. ಕಾರ್ಯಕ್ರಮವನ್ನು ಪ್ರೊ. ಡಿ.ಎಸ್‌. ನಾಯಕ ನಿರೂಪಿಸಿದರು.  

ಕಾರ್ಯಕ್ರಮದಲ್ಲಿ ಬೆಟಗೇರಿ ಭಾಗದ ಎಲ್ಲ ಶಾಲಾ ಕಾಲೇಜ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಕ ಶಿಕ್ಷಕಿಯರು, ಶಿಕ್ಷಣ ಸಂಯೋಜಕ ಮಡಿವಾಳರ, ಸಮಿತಿ ಸದಸ್ಯರುಗಳಾದ ಎಂ.ಟಿ. ಕಬ್ಬಿಣ, ಕೆ.ಆರ್‌. ಮೇರವಾಡೆ, ಆಂಜನೇಯ ಗುಂಟಕಲ್ಲ, ಭೋಜಪ್ಪ ಹೆಗ್ಗಡಿ, ಬಿ.ವೈ. ಕರಬಸಣ್ಣವರ, ಎಸ್‌.ಎಂ. ಹರಿಜನ, ಕೃಷ್ಣಾಸಾ ಬಾಕಳೆ, ಅಶೋಕ ಅರಸಿದ್ದಿ, ವೀರಣ್ಣ ಜ್ಯೋತಿ, ಸಿ.ಎಂ. ಮಾರನಬಸರಿ ಮುಂತಾದವರು ಪಾಲ್ಗೊಂಡಿದ್ದರು. 


ಸುದ್ದಿ ಓದಿ