ಕೊಪ್ಪಳ

ಗಾಂಧೀಜಿ ರವರ ಅಹಿಂಸೆ ಮತ್ತು ಸರಳತೆಯ ಆದರ್ಶ ಅಳವಡಿಸಿಕೊಳ್ಳಿ : ರವಿ ಚಂದ್ರ ಬಾಗಲಿ

ಗಾಂಧೀಜಿ ರವರ ಅಹಿಂಸೆ ಮತ್ತು ಸರಳತೆಯ ಆದರ್ಶ ಅಳವಡಿಸಿಕೊಳ್ಳಿ : ರವಿ ಚಂದ್ರ ಬಾಗಲಿ


          ಕೊಪ್ಪಳ  02: ಮಹಾತ್ಮ ಗಾಂಧೀಜಿ ಯವರ ಸತ್ಯ ,ಅಹಿಂಸೆ, ಸ್ವಚ್ಛತೆ ಹಾಗೂ ಸರಳ ಜೀವನದ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಪ್ಪಳ ನಗರದ ಸಿಪಿಎಸ್ ಶಾಲೆಯ ಎಸ್ ಡಿ ಎಂ ಸಿ ಕಮಿಟಿ ಅಧ್ಯಕ್ಷ ರವಿಚಂದ್ರ ಬಾಗಲಿ ಹೇಳಿದರು, ಅವರು ನಗರದ ಸಿಪಿಎಸ್ ಶಾಲಾ ಆವರಣದಲ್ಲಿ ಶುಕ್ರವಾರದಂದು ಏರಿ​‍್ಡಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜಯಂತಿ ಪ್ರಯುಕ್ತ ಅವರ ಭಾವಚಿತ್ರಗಳಿಗೆ ಮಾಲಾರೆ​‍್ಣ ಮಾಡಿ ಗೌರವ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಗಾಂಧೀಜಿಯವರ ಸರಳ ಜೀವನದ ಆದರ್ಶಗಳು ಇಂದಿಗೂ ಪ್ರತಿಯೊಬ್ಬರಿಗೂ ಮಾರ್ಗದರ್ಶಕವಾಗಿದೆ,  

ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಸರಳತೆ ಮತ್ತು ಪ್ರಮಾಣೀಕತೆ, ದೇಶಭಕ್ತಿ ಮತ್ತು ಕರ್ತವ್ಯ ನಿಷ್ಠೆ ಪ್ರತಿಯೊಬ್ಬರಿಗೂ ಉತ್ತಮ ಮಾದರಿಯಾಗಿದೆ ಎಂದು ಹೇಳಿದರು, ಮುಂದುವರೆದು ಮಾತನಾಡಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆಗಳನ್ನು ತಿಳಿದುಕೊಂಡು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಸಮಾಜದಲ್ಲಿ ಸ್ವಚ್ಛತೆ ಮತ್ತು ಶಿಸ್ತು ಬೆಳೆಸುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಸಿಪಿಎಸ್ ಶಾಲೆಯ ಎಸ್ ಡಿ ಎಮ್ ಸಿ ಕಮಿಟಿ ಅಧ್ಯಕ್ಷ ರವಿಚಂದ್ರ ಬಾಗಲಿ ಹೇಳಿದರು,

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಕಮಿಟಿಯ ಸದಸ್ಯರಾದ ಸಲೀಂ ಮದರಂಗಿ, ದೈಹಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಾಗೋಡಿ ,ಜಿಪಿಟಿ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಹ್ಯಾಟಿ, ಶ್ರೀ ಕಾಶಿನಾಥ್ ಸಿರಿಗೇರಿ ಶ್ರೀಮತಿ ಶೀಲಾ ಬಂಡಿ, ಶ್ರೀಮತಿ ಜಯಶ್ರೀ ದೇಸಾಯಿ, ಶ್ರೀಮತಿ ಜಲಜಾಕ್ಷಿ ಬೆಲ್ಲದ್ ಶ್ರೀಮತಿ ಶಶಿಕಲಾ, ಮೊಹಮ್ಮದ್ ಅಬೀದ್ ಹುಸೇನ್ ಅತ್ತಾರ್ ಸೇರಿದಂತೆ  ಬಿಈಡಿ ಪ್ರಶಿಕ್ಷಣಾರ್ಥಿಗಳು ,ಇತರ ಸಹ ಶಿಕ್ಷಕರು, ಸಿಬ್ಬಂದಿ ವರ್ಗದವರು ಎಸ್ ಡಿ ಎಮ್ ಸಿ ಕಮಿಟಿ ಸದಸ್ಯರು ಪಾಲ್ಗೊಂಡಿದ್ದರು. 


ಸುದ್ದಿ ಓದಿ