ನಾಳೆ ಶರಣ ಹೂಗಾರ ಮಾದಯ್ಯನವರ ಜಯಂತ್ಯೋತ್ಸವ ಆಚರಣೆ
ಕೊಪ್ಪಳ 03 : ಜಿಲ್ಲಾ ಹಾಗೂ ತಾಲೂಕ ಹೂಗಾರ ಸಮಾಜ , ಹೂಗಾರ ,ಜೀರ, ಗುರವ, ಪೂಜಾರ ,ಫುಲಾರಿ , ಫೂಲ್ ಮಾಲಿ ಸಮಾಜದ ಒಕ್ಕೂಟದ ವತಿಯಿಂದ ದಿ,5 ರ ಸೋಮವಾರ ಬೆಳಗ್ಗೆ 11:30 ಗಂಟೆಗೆ ನಗರದ ಭಾಗ್ಯನಗರ ರಸ್ತೆಯಲ್ಲಿರುವ ಪಾನಗಂಟಿ ಕಲ್ಯಾಣ ಮಂಟಪದಲ್ಲಿ ಶರಣ ಹೂಗಾರ ಮಾದಯ್ಯನವರ ಜಯ ಠ್ಯೋತ್ಸವ ಆಚರಣೆ ಸಮಾರಂಭ ಜರುಗಲಿದೆ ಎಂದು ಸಮಾಜದ ತಾಲೂಕಾಧ್ಯಕ್ಷ ಸತೀಶ್ ಹೂಗಾರ್ ಹೇಳಿದರು, ಅವರು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಏರಿ್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಈ ಕುರಿತು ಮಾಹಿತಿ ನೀಡಿದ ಅವರು ಸಮಾಜದ ಶೈಕ್ಷಣಿಕ ಆರ್ಥಿಕ ರಾಜಕೀಯ ಬೆಳವಣಿಗೆಗಾಗಿ ಸರಕಾರದ ಗಮನ ಸೆಳೆಯುವದರ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯ ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಲು ಮತ್ತು ಸಮಾಜದ ಸಂಘಟನೆ ಬೆಳೆಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು, ಮುಂದುವರೆದು ಮಾತನಾಡಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಮೈನಳ್ಳಿ ಬಿಕ್ಕನಹಳ್ಳಿ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಸಿನ್ನೂರು ನದಿ ಮಹಾಶಕ್ತಿ ಪೀಠದ ಶ್ರೀ ಗುರು ರಾಜೇಂದ್ರ ಶಿವಯೋಗಿಗಳು ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಉದ್ಘಾಟಿಸಲಿದ್ದಾರೆ,