ಗದಗ

ಜೆನ್ಜಿ ಕೇವಲ ಒಂದು ಪೀಳಿಗೆಯಲ್ಲ, ಒಂದು ಸಂಘಟನೆ: ಆಕಾಶ ಬಳ್ಳೊಳ್ಳಿ

ಜೆನ್ಜಿ ಕೇವಲ ಒಂದು ಪೀಳಿಗೆಯಲ್ಲ, ಒಂದು ಸಂಘಟನೆ: ಆಕಾಶ ಬಳ್ಳೊಳ್ಳಿ


ಗದಗ 03:  ಜೆನ್ ಜಿ ಯುವ ಜನತೆಯು ಬಿಜೆಪಿಯನ್ನು ದ್ವೇಷಿಸುವವರು ಹಾಗೂ ಜೆನ್ ಜಿ ಒಂದು ಬಿಜೆಪಿ ವಿರೋಧಿ ಸಂಘಟನೆಯಾಗಿದೆ ಎಂದು ಹೇಳಿಕೆ ನೀಡಿರುವ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ  ಬಿ. ಬಿ. ಅಸೂಟಿ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಜಿಲ್ಲಾ ಜೆನ್ ಜಿ ಫೋರಂ ಸಂಚಾಲಕ ಆಕಾಶ ಬಳ್ಳೊಳ್ಳಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು,  ಕಾಂಗ್ರಸ್ ಪಕ್ಷಕ್ಕೆ ಜೆನ್ ಜಿ ಎಂಬುದರ ಬಗ್ಗೆ ತಿಳುವಳಿಕೆ ಕೊರತೆ ಇದೆ.  ಜೆನ್ ಜಿ ಎಂಬುದು ಒಂದು ಪೀಳಿಗೆಯೇ ಹೊರತು ಯಾವುದೇ ರಾಜಕೀಯ ಸಂಘಟನೆಯಲ್ಲ.  ರಾಜಕೀಯ ಪಕ್ಷವಲ್ಲ ಅಥವಾ ನಿರ್ದಿಷ್ಟ ರಾಜಕೀಯ ಪಕ್ಷವನ್ನು ವಿರೋಧಿಸುವ ಉದ್ದೇಶದಿಂದ ರಚಿಸಲಾದ ಗುಂಪೂ ಅಲ್ಲ ಎಂದು ತಿಳಿಸಿದ್ದಾರೆ.ಜೆನ್ ಜಿ ಪೀಳಿಗೆಯು ವಿವಿಧ ಸಿದ್ಧಾಂತಗಳು, ಅಭಿಪ್ರಾಯಗಳು ಹಾಗೂ ರಾಜಕೀಯ ನಿಲುವುಗಳನ್ನು ಹೊಂದಿರುವ ಯುವಜನತೆ. ನಮ್ಮ ಪ್ರತಿಭಟನೆಗಳು ನಮ್ಮ ಜಿಲ್ಲೆಯ ಜನರ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪ್ರಾರಂಭವಾಗಿವೆ. ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವುದು,   ಬರಗಾಲದಿಂದ ಸಂಕಷ್ಟಕ್ಕೊಳಗಾದ ರೈತರು ಮತ್ತು ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ನೆರವು ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು,  ಜಿಲ್ಲೆಯ ಪ್ರತಿಯೊಬ್ಬರಿಗೂ ಶುದ್ಧ ಹಾಗೂ ಸಮರ​‍್ಕ ಕುಡಿಯುವ ನೀರನ್ನು ಒದಗಿಸುವುದು,  ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿ ಜಿಲ್ಲೆಯ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲು ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸಲು ಸರ್ಕಾರವನ್ನು ಒತ್ತಾಯಿಸಲು ಹುಟ್ಟಿಕೊಂಡ ವೇದಿಕೆ ಆಗಿದೆ. ಇವೆಲ್ಲವೂ ನಮ್ಮ ಜಿಲ್ಲೆಯ ಜನರ ಜೀವನ, ಜೀವನೋಪಾಯ ಹಾಗೂ ಭವಿಷ್ಯಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿಯ ಪ್ರಮುಖ ವಿಚಾರಗಳಾಗಿವೆ. ನಮ್ಮ ಪ್ರತಿಭಟನೆಗಳು ಯಾವುದೇ ರಾಜಕೀಯ ಪಕ್ಷದ ಮೇಲಿನ ದ್ವೇಷದಿಂದ ಕೂಡಿಲ್ಲ. ಬದಲಾಗಿ, ನಮ್ಮ ಜಿಲ್ಲೆಯ ಅಭಿವೃದ್ಧಿ, ಜನರ ಹಕ್ಕುಗಳು ಮತ್ತು ಸಾರ್ವಜನಿಕ ಕಲ್ಯಾಣವನ್ನು ಸಾಧಿಸುವ ಉದ್ದೇಶವನ್ನು ಹೊಂದಿವೆ ಎಂದು ತಿಳಿಸಿದ್ದಾರೆ.ಬಿ. ಬಿ. ಅಸೂಟಿ ಅವರು ಜೆನ್ ಜಿ ಎಂಬುದು ಒಂದು ಪೀಳಿಗೆಯ ಹೆಸರೇ ಹೊರತು ಸಂಘಟನೆಯ ಹೆಸರಲ್ಲ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು.  ಯುವಜನತೆಯ ಹೋರಾಟದ ನೈಜ ಉದ್ದೇಶವನ್ನು ಅರಿಯದೆ ರಾಜಕೀಯ ಬಣ್ಣ ನೀಡುವ ಬದಲು, ನಮ್ಮ ಜಿಲ್ಲೆಯ ಜನರ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಚರ್ಚಿಸಲು ಅವರು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. 


ಸುದ್ದಿ ಓದಿ