ಗದಗ

ಶತಮಾನ ಕಂಡ ಶಾಲೆಯನ್ನು ಉಳಿಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ

ಶತಮಾನ ಕಂಡ ಶಾಲೆಯನ್ನು ಉಳಿಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ


 ಲಕ್ಷ್ಮೇಶ್ವರ " 03 : ಸ್ವಾತಂತ್ರ್ಯ ಪೂರ್ವದಲ್ಲಿಯೇ ಬೆಳಗಿದ ಜ್ಞಾನ ಸೂರ್ಯ. ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1926 ರಲ್ಲಿ ಮಿರಜ್ ಸಂಸ್ಥಾನಿಕರಿಂದ ಆರಂಭಗೊಂಡ ಶ್ರೀ ಉಮಾ ವಿದ್ಯಾಲಯ ಪುರಸಭೆಯ ಪ್ರೌಢಶಾಲೆಗೆ ಈಗ ನೂರರ ಸಂಭ್ರಮ. ನೂರು ವರ್ಷಗಳಲ್ಲಿ ಸಾವಿರ ಸಾವಿರ ಸಮರ್ಥ ವಿದ್ಯಾರ್ಥಿಗಳನ್ನು ನಾಡಿಗೆ ನೀಡಿದ ಹೆಮ್ಮೆ ಈ ಪ್ರೌಢಶಾಲೆಯದು. ಈ ಶತಮಾನದ ಶಾಲೆಯನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ" ಎಂದು ನ್ಯಾಯವಾದಿ,ಸಾಹಿತಿ ಬಿ.ಎಸ್‌.ಬಾಳೇಶ್ವರಮಠ ಅಭಿಪ್ರಾಯಪಟ್ಟರು. ಅವರು ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಉಮಾ ವಿದ್ಯಾಲಯ ಪುರಸಭೆಯ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ "ಮಾಸದ ಮಾತು" ಕಾರ್ಯಕ್ರಮ ಸರಣಿಯ 42 ನೇ ಕಾರ್ಯಕ್ರಮ "ಶತಮಾನ ಕಂಡ ಲಕ್ಷ್ಮೇಶ್ವರದ ಐತಿಹಾಸಿಕ ಶ್ರೀ ಉಮಾ ವಿದ್ಯಾಲಯ ಪುರಸಭೆಯ ಪ್ರೌಢಶಾಲೆ-ಒಂದು ಸ್ಮರಣೆ" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.ಶಾಲೆಯ ಶತಮಾನದ ಇತಿಹಾಸ ಸ್ಮರಿಸಿ ಮಾತನಾಡಿದ ವಿಶ್ರಾಂತ ಶಿಕ್ಷಕ ಸಾಹಿತಿ ಎಸ್‌.ಎಫ್‌. ಆದಿ "ಶಾಲೆಯ ನೂರು ವರ್ಷಗಳ ಸಾಧನೆಯ ಹಾದಿಯನ್ನು ಸ್ಮರಿಸಿ, ಅದರ ಇತಿಹಾಸವನ್ನು ಮುಂದಿನ ತಲೆಮಾರಿನ ಮುಂದಿರಿಸುವ ಸಾರ್ಥಕ ಕಾರ್ಯವನ್ನು ಲಕ್ಷ್ಮೇಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವುದು ಸ್ತುತ್ಯಾರ್ಹ. ಶತಮಾನದ ಶಾಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ" ಎಂದು ಅಭಿಪ್ರಾಯ ಪಟ್ಟರು. ಅಧ್ಯಕ್ಷೀಯ ಮಾತುಗಳನ್ನಾಡಿದ ಶಾಲೆಯ ಮುಖ್ಯೋಪಾಧ್ಯಾಯ ಎಂ.ಬಿ.ಸಂಗನಪೇಟ "ಆಂಗ್ಲ ಮಾಧ್ಯಮದ ವ್ಯಾಮೋಹದ ನಡುವೆಯೂ ಕೂಡ ಇಂದು ನಮ್ಮ ಪ್ರೌಢಶಾಲೆಯಲ್ಲಿ 230 ಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವುದು ಶಾಲೆಯ ಹಾಗೂ ಶಿಕ್ಷಕರ ನಂಬಿಕೆಯ ಪ್ರತೀಕವಾಗಿದೆ. ಸಾಕಷ್ಟು ಪೈಪೋಟಿಗಳ ನಡುವೆಯೂ ಶಾಲೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುತ್ತಿದೆ.  


ಸುದ್ದಿ ಓದಿ