ಗದಗ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಕುಟುಂಬದವರನ್ನು ನಿಂದನೆ ಮಾಡಿರುವುದು ಖಂಡನೀಯ : ರವಿಂಧ್ರನಾಥ ದಂಡಿನ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಕುಟುಂಬದವರನ್ನು ನಿಂದನೆ  ಮಾಡಿರುವುದು ಖಂಡನೀಯ : ರವಿಂಧ್ರನಾಥ ದಂಡಿನ

ಲೋಕದರ್ಶನ ವರದಿ 


ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಕುಟುಂಬದವರನ್ನು ನಿಂದನೆ  ಮಾಡಿರುವುದು ಖಂಡನೀಯ : ರವಿಂಧ್ರನಾಥ ದಂಡಿನ  


ಗದಗ 03 :  ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ ಹಾಗೂ ಅವರ ಕುಟುಂಬದ ಸದಸ್ಯರ ಕುರಿತು   ವಯಕ್ತಿಕವಾಗಿ ನಿಂದನೆ ಮಾಡಿರುವ  ಶಶಿಕಾಂತ ಗುರೂಜಿ  ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಬಿಜೆಪಿ ಮುಖಂಡರು ಹಾಗೂ  ಭಾರತ ಆಹಾರ ನಿಗಮದ ರಾಜ್ಯ ಸದಸ್ಯರಾದ ರವೀಂದ್ರನಾಥ ದಂಡಿನ ಅವರು ಹೇಳಿದರು. 




 ನಗರದ ಪತ್ರಿಕಾ ಭವನದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ  ಅವರು ಮಾತನಾಡಿ, ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ನಡೆದ ರೈತರ ಹೋರಾಟ ರೈತರನ್ನೇ ದಿಕ್ಕು ತಪ್ಪಿಸಿದಂತಿದೆ.ರೈತರಿಗೆ ಅವಮಾನ ಮಾಡಿದಂತಿದೆ.  ನಿಜವಾದ ರೈತರು ಯಾರಿಗೂ ನೋವನ್ನುಂಟು ಮಾಡುವ ಪ್ರಯತ್ನ ಮಾಡುವುದಿಲ್ಲ ಬರಗಾಲದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಸರಿಯಾಗಿ ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿಲ್ಲ, ರೈತರಿಗೆ ವಿದ್ಯುತ್ ನೀಡುತ್ತಿಲ್ಲ, ದನಗಳಿಗೆ ಮೇವು ನೀಡುತ್ತಿಲ್ಲ, ಆದರೆ ಹೋರಾಟದ ನೆಪದಲ್ಲಿ ಶಶಿಕಾಂತ ಗುರೂಜಿ ಎಂಬವರು ಯಾರನ್ನೂ ಮೆಚ್ಚಿಸಲು  ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ  ಮತ್ತು ಅವರ ಕುಟುಂಬದ ಸದಸ್ಯರನ್ನು ವಯಕ್ತಿಕವಾಗಿ ನಿಂದಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಮೋದಿ ಅವರು ರೈತರ ಬಗ್ಗೆ ಅಭಿಮಾನ ಇರುವುದರಿಂದ ಕೇಂದ್ರದಿಂದ ಸಾಕಷ್ಟು ಯೋಜನೆಗಳನ್ನು ರೈತರಿಗಾಗಿ ನೀಡಿದ್ದಾರೆ. ಮೋದಿಯವರೊಂದಿಗೆ ನಿಕಟ ಸಂಪರ್ಕ ಇರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ  ಅವರ ಜನಪ್ರಿಯತೆ ಹೆಚ್ಚಾಗುವುದನ್ನು ಸಹಿಸದೆ ಅವರ ಹೆಸರಿಗೆ ಕಳಂಕ ತರುವ ಕೆಲಸ ನಡೆಯುತ್ತಿದೆ ಕೂಡಲೇ ಪ್ರಲ್ಹಾದ ಜೋಶಿ ಮತ್ತು ಅವರ ಕುಟುಂಬದವರನ್ನು ನಿಂದಿಸಿರುವ ಶಶಿಕಾಂತ ಗುರೂಜಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಮತ್ತು  ಇದೇ ರೀತಿ ಅವರ ನಡೆ ಮುಂದುವರೆದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. 




 ಬಿಜೆಪಿ ಮುಖಂಡ ಅನಿಲ್ ಕುಲಕರ್ಣಿ ಅವರು ಮಾತನಾಡಿ, ಹೋರಾಟಗಳನ್ನು ಮಾಡಬೇಕು ಆದರೆ, ನ್ಯಾಯಯುತ ಬೇಡಿಕೆಗಳು  ಇಡೇರಿಸುವಂತೆ ಇರಬೇಕು ಹೊರತು ಬೇರೆಯವರ ತೇಜೋವದೆ  ಮಾಡುವ ಉದ್ದೇಶ ಹೊಂದಿರಬಾರದು ಇದು ಖಂಡನೀಯ. ಜೋಶಿಯವರು ದಕ್ಷತೆಯಿಂದ ಪ್ರಬಲ ನಾಯಕರಾಗಿದ್ದಾರೆ ಅವರ ಹೆಸರಿಗೆ ಮಸಿ ಬೆಳೆಯುವ ಪ್ರಯತ್ನ ನಡೆಯುತ್ತಿರುವದು ಖಂಡನೀಯ ನಾವು ರೈತ ಹೋರಾಟದ ವಿರೋಧಿಗಳಲ,್ಲ ನ್ಯಾಯಯುತ ಬೇಡಿಕೆಗಳ ಹೋರಾಟಕ್ಕೆ ನಮ್ಮ ಬೆಂಬಲವು ಇದೆ ವೈಯಕ್ತಿಕ ನಿಂದನೆ, ಅಹಿತಕರ ಪದ ಬಳಕೆ, ಕುಟುಂಬ ಸದಸ್ಯರಿಗೆ ಅವಮಾನ ಮಾಡುವದು ಸೂಕ್ತವಲ್ಲ. ಕೂಡಲೇ ಶಶಿಕಾಂತ ಗುರೂಜಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.  




 ಹಿರಿಯ ಮುಖಂಡರಾದ ತೋಟೋಸಾ ಬಾಂಡಗೆ  ಅವರು ಮಾತನಾಡಿ, ಜೋಶಿ ಅವರು ಉತ್ತರ ಕರ್ನಾಟಕ ಭಾಗದ ಸಂಸದರಾಗಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರ ವಿರುದ್ಧ ವಯಕ್ತಿಕವಾಗಿ ಬಾಯಿಯನ್ನು ಹರಿಬಿಡುವುದು ಸರಿಯಲ್ಲ ಹೋರಾಟದ ಬರದಲ್ಲಿ ಜನರನ್ನು ಮೆಚ್ಚಿಸುವುದಕ್ಕೋಸ್ಕರ ಹಿರಿಯ ಸಚಿವರನ್ನು ನಿಂದಿಸಿರುವುದು ಖಂಡನೀಯವಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಹಿರಿಯರಾದ ಶ್ರೀಪತಿ ಉಡುಪಿ, ಮಾಧೂಸಾ ಮೆಹರವಾಡೆ,  ಮುತ್ತು ಮುಶೀಗೇರಿ, ಶಂಕರ ಕಾಕಿ, ಸುರೇಶ್ ಚಿತ್ರರಗಿ, ಲಕ್ಷ್ಮೀ ಕಾಕಿ  ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ