ಸಾಯಿ ಬುಡೋಕನ್ ಕರಾಟೆ ಕ್ಲಬ್ನಲ್ಲಿ ಗಾಂಧಿ ಜಯಂತಿ ಆಚರಣೆ
ಕೊಪ್ಪಳ, ಅ. 3 : ನಗರದ ಸಾಯಿ ಬುಡೊಕನ್ ಕರಾಟೆ ಕ್ಲಬ್ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯನ್ನು ಗೌರವ ಹಾಗೂ ಸ್ಮರಣೆಯೊಂದಿಗೆ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕ್ಲಬ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಮಾಲಾರೆ್ಪಣ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀಕಾಂತ್ ಪಿ. ಕಲಾಲ್ ಅವರು ಗಾಂಧೀಜಿಯವರ ಸರಳ ಜೀವನ, ಸ್ವಾತಂತ್ರ್ಯ ಹೋರಾಟದಲ್ಲಿನ ಮಹತ್ವದ ಪಾತ್ರ ಹಾಗೂ ಸತ್ಯ, ಅಹಿಂಸೆ ಮತ್ತು ಶಾಂತಿಯ ತತ್ವಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.ಗಾಂಧೀಜಿಯವರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಶಿಸ್ತು, ಸತ್ಯನಿಷ್ಠೆ ಹಾಗೂ ದೇಶಪ್ರೇಮದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಕರಾಟೆ ಶಿಕ್ಷಕರಾದ,ಮೌಲಾ ಸವಿತಾ, ಗಣೇಶ,ಸಂತೋಷ್ ಸಂಜಯ್ ,ಧ್ರುವ,ಗಗನ್ ಐಶ್ವರ್ಯ ಕಟಿಕ್,ಹಾಗೂ ಸೇರಿದಂತೆ ಕ್ಲಬ್ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.