ಹಿರಿಯ ನಾಗರಿಕರು ಅನುಭವದ ಗಣಿಗೆ ಗೌರವಿಸಿ: ಬ್ರಹ್ಮಕುಮಾರಿ ಯೋಗಿನಿ ಅಕ್ಕ
ಕೊಪ್ಪಳ 03: ಹಿರಿಯರು ಕೇವಲ ವಯಸ್ಸಿನಲ್ಲಿ ಮಾತ್ರ ದೊಡ್ಡವರಲ್ಲ ಅವರು ಅನುಭವ ತಾಳ್ಮೆ ಸಹನೆ ಮತ್ತು ಜೀವನ ಜ್ಞಾನದ ಭಂಡಾರ. ಅವರ ಅನುಭವಗಳು ನಮಗೆ ದಾರೀದೀಪವಾಗುತ್ತವೆ ಎಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕ ತಿಳಿಸಿದರು ,ಅವರು ನಗರದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಆಯೋಜಿಸಿದ ವಿಶ್ವ ಹಿರಿಯ ನಾಗರಿಕರ ದಿನದ ಸಾನಿಧ್ಯವನ್ನು ವಹಿಸಿ ಮಾತನಾಡುತ್ತಾ ಹಿರಿಯರ ಪ್ರೀತಿ ಮತ್ತು ಶುಭ ಭಾವನೆ ತುಂಬಿದ ಆಶೀರ್ವಾದ ಇಂದಿನ ಯುವ ಪೀಳಿಗೆಗೆ ಅಗತ್ಯ ಮತ್ತು ಕುಟುಂಬಕ್ಕೆ ಅದು ಧೈರ್ಯವನ್ನು ನೀಡುತ್ತದೆ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಉತ್ತಮ ಮೌಲ್ಯ ಸಂಸ್ಕಾರ ಮಾನವೀಯತೆಯನ್ನ ಕಲಿಸುವಲ್ಲಿ ಹಿರಿಯರ ಪಾತ್ರ ಬಹಳ ಮಹತ್ವದ್ದು ಅಧ್ಯಾತ್ಮ ದೃಷ್ಟಿಕೋನದಲ್ಲಿ ವಿಚಾರ ಮಾಡಿದಾಗ ದೇಹಕ್ಕೆ ವಯಸ್ಸು ಆಗುತ್ತದೆ ಆದರೆ ಆತ್ಮಕ್ಕೆ ಎಂದಿಗೂ ವಯಸ್ಸಾಗುವುದಿಲ್ಲ ಹಿರಿಯರ ಅನುಭವಯುಕ್ತ ಮಾತುಗಳನ್ನು ಕೇಳುವುದು ಅವರ ಭಾವನೆಗಳನ್ನು ಗೌರವಿಸುವುದು ಅವರಿಗೆ ಪ್ರೀತಿ ಮತ್ತು ಸಮಯ ನೀಡುವುದು ಆದ್ಯ ಕರ್ತವ್ಯ ಮತ್ತು ಮಾನವೀಯತೆಯು ಆಗಿದೆ ಹಿರಿಯರು ಅಧ್ಯಾತ್ಮ ಮಾರ್ಗದಲ್ಲಿ ಸತ್ಯ ಶಾಂತಿ ನೆಮ್ಮದಿ ಪಡೆಯಲು ಸಾಧ್ಯ ಹಿರಿಯರು ತಮ್ಮೊಂದಿಗೆ ಮತ್ತು ಕುಟುಂಬದವರೊಂದಿಗೆ ಸಕರಾತ್ಮಕ ಚಿಂತನೆ ಮತ್ತು ಭಾವನೆಗಳನ್ನು ಹೊಂದಲು ಆಧ್ಯಾತ್ಮ ಅವರಿಗೆ ಸಹಕಾರಿಯಾಗುತ್ತದೆ ಎಂದರು ಹಿರಿಯ ನಾಗರಿಕರಿಂದಲೇ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು ಉದ್ಘಾಟಿಸಿದ ಶ್ರೀ ಬಿರುಂದರ ಕೇಸರಿಮಠ ನಿವೃತ್ತ ಸಹಾಯಕ ಉಪನಿರ್ದೇಶಕರು ಸಹಕಾರ ಸಂಘ ಕೊಪ್ಪಳ ಮಾತನಾಡುತ್ತಾ ಹಿರಿಯ ನಾಗರಿಕರು ಅಧ್ಯಾತ್ಮವನ್ನು ಅಳವಡಿಸಿಕೊಂಡಾಗ ಸಾರ್ಥಕ ಬದುಕಿನ ಅನುಭವ ಮಾಡಲು ಸಾಧ್ಯ ಎಂದರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಸಹಕಾರಿ ಯೂನಿಯನ್ ನ ಉಪಾಧ್ಯಕ್ಷರಾದ ಹಾಲಯ್ಯ ಹುಡೆ ಜಾಲಿಯವರು ಮಾತನಾಡುತ್ತಾ ಹಿರಿಯರಿಗೆ ಮಾನಸಿಕ ಶಾಂತಿ ನೆಮ್ಮದಿ ಕಾಣಲು ಆಧ್ಯಾತ್ಮ ಮಾರ್ಗ ಮತ್ತು ಧ್ಯಾನ ಬೇಕೇ ಬೇಕು ಎಂದರು ವೇದಿಕೆಯ ಮೇಲೆ ರುದ್ರ್ಪ ಅಧ್ಯಕ್ಷರು ವಿಶ್ವಕರ್ಮ ಸಮಾಜ ಶ್ರೀ ಹನುಮಂತಪ್ಪ ನಿವೃತ್ತ ಅಧಿಕಾರಿಗಳು ಆಹಾರ ಮತ್ತು ಸರಬರಾಜು ಇಲಾಖೆ ಶ್ರೀ ಗವಿಸಿದ್ದಪ್ಪ ಮೆಡಿಕಿನಾಳ, ಮುಖಂಡರಾದ ಗಂಗಾಧರ ಕಬ್ಬೇರ್ ಮುಂತಾದವರು ಉಪಸ್ಥಿತರಿದ್ದರು ಹಿರಿಯ ನಾಗರಿಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.