ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಅವ್ಯವಹಾರ ಆರೋಪ: ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
ಜಮಖಂಡಿ 03 : ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಿಜವಾದ ಸಾಹಿತಿಗಳನ್ನು ಹೊರಗಿಟ್ಟು, ಕನ್ನಡದ ಗಾಳಿ ಗಂಧ ಗೊತ್ತಿರದ ಹಾಗೂ ರಾಜಕೀಯ ಮುಖಂಡರು ಹಾಗೂ ಹಣವಂತರನ್ನು ಪದಾಧಿಕಾರಿಗಳನ್ನಾಗಿ ಮಾಡಿಕೊಂಡು 10ನೇ ಕನ್ನಡ ಸಾಹಿತ್ಯ ಸಮ್ಮೇನವನ್ನು ಮಾಡುತ್ತಿರುವದು ಖಂಡನೀಯ. ಅಂದು ಕಪ್ಪು ಬಟ್ಟೆ ಕಟ್ಟಿಕೊಂಡು. ಕಪ್ಪು ಧ್ವಜದ ಮೂಲಕ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪ್ರಜಾಪರಿವರ್ತನೆ ವೇದಿಕೆ ರಾಜ್ಯ ಕಾರ್ಯದರ್ಶಿ ಗೋಪಿನಾಥ ಮೀಸಿ, ಭೀಮ ಆರ್ಮಿ ಜಿಲ್ಲಾಧ್ಯಕ್ಷ ರಮೇಶ ಬಳೋಲಗಿಡದ, ದಲಿತ ಮುಖಂಡರಾದ ಚನ್ನಬಸು ಗುಣದಾಳ, ಚಿದಾನಂದ ಜನವಾಡ ಎಚ್ಚರಿಕೆಯನ್ನು ನೀಡಿದರು.
ನಗರದ ಅನ್ನಪೂರ್ಣವೇಶ್ವರಿ ಹೊಟೇಲ್ ಸಭಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಸಾಪ ತಾಲ್ಲೂಕು ಅಧ್ಯಕ್ಷ ಸಂತೋಷ ತಳಕೇರಿ ಹುನ್ನೂರು ಪ್ರೌಢಶಾಲೆಯಲ್ಲಿ ಮುಖ್ಯಗುರುಗಳಾಗಿದ್ದು ಶಾಲೆಗೆ ಹೋಗದೆ ರಾಜಕೀಯ ಮಾಡುತ್ತಾ ಸಂಚರಿಸುತ್ತಾರೆ, ಮುಖ್ಯಗುರುಗಳು ಆದವರು ಕಸಾಪ ಅಧ್ಯಕ್ಷರಾಗಲು ಅವಕಾಶವಿಲ.್ಲ ಅವರು ಇಲಾಖೆಯಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ ಕೂಡಲೇ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು, ಗಣಿತ ಬೋಧನೆ ಮಾಡುವ ಇವರು ಕನ್ನಡ ಬೆಳೆಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಭೀಮ ಆರ್ಮಿ ಜಿಲ್ಲಾಧ್ಯಕ್ಷ ರಮೇಶ ಬಳೋಲಗಿಡದ ಮಾತನಾಡಿ, ಹಲವಾರು ಸಾಹಿತಿಗಳ, ಕನ್ನಡದ ಸಮಸ್ಯೆಗಳನ್ನು ಆಲಿಸಿ ವರ್ಷವಿಡಿ ಕನ್ನಡ ಬೆಳೆಸುವದನ್ನು ಬಿಟ್ಟು ವರ್ಷಕೊಮ್ಮೆ ಬಂದು ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಮಾಡಲು ವಿವಿಧ ಇಲಾಖೆಯ ಅಧಿಕಾರಿಗಳಿಂದ ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಾರೆ, ಲಕ್ಷಾಂತರ ಹಣ ಸಂಗ್ರಹ ಮಾಡುತ್ತಾರೆ ಆದರೆ ಇಲ್ಲಿಯವರೆಗೆ ಯಾವ ಸಮ್ಮೇಳನದ ಲೆಕ್ಕಪತ್ರವನ್ನು ನೀಡಲ್ಲ, ದೇಣಿಗೆ ಹಣ ಪಡೆದು ರಶಿದಿ ನೀಡುವದಿಲ್ಲ ಇದರಲ್ಲಿ ಹಣದ ಅವ್ಯವಹಾರಗಳು ಆಗಿದ್ದು, ಆಡಳಿತಾಧಿಕಾರಿ ಕ್ರಮ ಕೈಗೊಳ್ಳಬೇಕು, ಹೆದರಿಸಿ ಬೆದರಿಸಿ ಹಣ ಕೇಳಿದರೆ ಅಧಿಕಾರಿಗಳು ದೂರು ನೀಡಬೇಕು ಎಂದರು.
ದಲಿತ ಮುಖಂಡ ಚನ್ನಬಸು ಗುಣದಾಳ ಮಾತನಾಡಿ, ಹಲವಾರು ದತ್ತಿನಿಧಿಗಳು ಎಲ್ಲಿವೆ? ಯಾವ ಬ್ಯಾಂಕನಲ್ಲಿ ಠೇವಣಿ ಮಾಡಿದ್ದಾರೆ ಅಥವಾ ವಯಕ್ತಿಕವಾಗಿ ಬಳಸಿಕೊಂಡಿದ್ದಾರಾ, ಕಳೆದ ನಾಲ್ಕು ವರ್ಷದಿಂದ ಭಾರಿ ಪ್ರಮಾಣದ ಹಣ ಸಂಗ್ರಹ ಮಾಡಿ ಅವ್ಯವಹಾರ ಮಾಡಿರುವ ಗುಮಾನಿ ಇದೆ. ಆದ್ದರಿಂದ ಎಲ್ಲ ಲೆಕ್ಕಪತ್ರವನ್ನು ಸಾರ್ವಜನಿಕರ ಮುಂದೆ ಇಡಬೇಕು, ಇದು ಕೇವಲ ಬಿಜೆಪಿ ಕಾರ್ಯಕ್ರಮ ಎಂಬಂತೆ ಬಿಂಬಿತವಾಗುತ್ತಿದೆ ಎಂದರು.
ಕಸಾಪ ಯಾರ ಮನೆ ಸ್ವತ್ತಲ್ಲ, ಸಮ್ಮೇಳನ ಅಧ್ಯಕ್ಷರ ಆಯ್ಕೆಗೆ ನಾಲ್ಕು ಜನ ಸೇರಿ ಅವರ ಸಾಹಿತ್ಯ ಚಟುವಟಿಕೆ ಗಮನಿಸದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವದು ಖಂಡನೆ, ರಾಜಕೀಯ ಮುಖಂಡರನ್ನು ಕಾರ್ಯಾಧ್ಯಕ್ಷ ಕೋಶಾಧ್ಯಕ್ಷ ಮಾಡಿರುವದು ಹೇಗೆ, ಬಿಜೆಪಿ ಮುಖಂಡರ ಮನೆಗಳಲ್ಲಿ ಕಸಾಪ ಕಾರ್ಯಕ್ರಮ ನಡೆಯುತ್ತವೆ. ಇದು ಬಿಜೆಪಿ ಪಕ್ಷಕ್ಕೆ ಸೇರಿದಂತೆ ಬಿಂಬಿಸುತ್ತಿರುವದು ಕನ್ನಡಾಭಿಮಾನಿಗಳಲ್ಲಿ ನಿರಸ ಉಂಟಾಗಿದೆ. ಯಾರಾದರು ಪ್ರಶ್ನೆ ಮಾಡಿದರೆ ಅಂತವರಿಗೆ ಹೆದರಿಸುವ ಕಾರ್ಯ ನಡೆಯುತ್ತಿವೆ ಎಂದರು.
ವಕೀಲ ಚಿದಾನಂದ ಜನವಾಡ ಮಾತನಾಡಿ, ಅವ್ಯವಹಾರ ಮಾಡಿದಕ್ಕೆ ರಾಜ್ಯಾಧ್ಯಕ್ಷರ ಉಚ್ಚಾಟನೆಯಾಗಿ ಆಡಳಿತಾಧಿಕಾರಿಯಾಗಿ ಕೆ, ಎ, ದಯಾನಂದ ನೇಮಕ ಮಾಡಿದ್ದಾರೆ, ಕಸಾಪ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರು ಮಾಡಿರುವ ಅವ್ಯವಹಾರದ ಬಗ್ಗೆ ತಣಿಖೆ ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಅ.4 ರಂದು ನಡೆಯುವ ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಕಟ್ಟಿಕೊಂಡು ಕಪ್ಪು ಧ್ವಜ ಪ್ರದರ್ಶನ ಮಾಡಲಾಗುದು ಎಂದರು.