ಬೆಳಗಾವಿ

ಹಾರೂಗೇರಿಯಲ್ಲಿ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆ

ಹಾರೂಗೇರಿಯಲ್ಲಿ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆ

ಲೋಕದರ್ಶನ ವರದಿ 


ಹಾರೂಗೇರಿ 03 : ಕಳೆದ ಡಿಸೆಂಬರ್‌ನಲ್ಲೇ ಜಿಲ್ಲೆಗಳ ಘೋಷಣೆಯಾಗಿ, ಹಾರೂಗೇರಿ ತಾಲೂಕು ಕೇಂದ್ರವಾಗಬೇಕಿತ್ತು. ಆದರೆ ಚುನಾಯಿತ ಜನಪ್ರತಿನಿಧಿಗಳಲ್ಲಿ ಒಮ್ಮತವಿಲ್ಲದ ಕಾರಣ, ಜಿಲ್ಲೆ ಹಾಗೂ ತಾಲೂಕು ರಚನೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು. 

   ಪಟ್ಟಣದ ಆದಿನಾಥ ಜೈನ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ತಾಲೂಕಾಡಳಿತ ರಾಯಬಾಗ ಮತ್ತು ಪುರಸಭೆ ಹಾರೂಗೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಹಾರೂಗೇರಿ ತಾಲೂಕು ರಚನೆ ಕುರಿತ ಅರ್ಜಿಗೆ ಉತ್ತರಿಸಿದ ಅವರು ಹಾರೂಗೇರಿಗೆ ಶೀಘ್ರ ಸೂಕ್ತ ಸ್ಥಾನಮಾನ ಸಿಗಲಿದೆ ಎಂದರು. 

   ಕುಡಚಿ ಕ್ಷೇತ್ರದಲ್ಲಿ ನಡೆದ ಕಳೆದೆರಡು ಪ್ರಜಾಸೇವೆ ಆಂದೋಲನದಲ್ಲಿ ನಿವೇಶನ ಬಗ್ಗೆ ಹೆಚ್ಚು ಸಾರ್ವಜನಿಕರಿಂದ ಅರ್ಜಿಗಳು ಬಂದಿವೆ. ಸರ್ಕಾರ ಭೂ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯಡಿ ನಿವೇಶನ ರಹಿತರಿಗೆ ಮನೆಗಳು ಮಂಜೂರಾಗಲಿವೆ. 

   ರಾಯಬಾಗ ತಹಸೀಲ್ದಾರ ಮಹಾದೇವ ಸನಮುರಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರಜಾಸೇವೆ ಕಾರ್ಯಕ್ರಮದಲ್ಲಿ ದಾಖಲಾಗುವ ಸಮಸ್ಯೆಗಳು ಕಾಲಮಿತಿಯೊಳಗೆ ಪರಿಹಾರವಾಗಲಿವೆ. ಯಲ್ಪಾರಟ್ಟಿ ಗ್ರಾಮದ ಭರಮದೇವರ ಗುಡಿಯ ಮಹಿಳೆಯರು 30ಕ್ಕೂ ಹೆಚ್ಚು ಕುಟುಂಬಗಳು ಗಾವಠಾಣಾ ಜಾಗದಲ್ಲಿ ಕಳೆದ 50 ವರ್ಷಗಳಿಂದ ವಾಸವಾಗಿದ್ದು, ಹಕ್ಕುಪತ್ರಕ್ಕಾಗಿ ಅಲೆದಾಡುವಂತಾಗಿದೆ. 

   ಪುರಸಭೆ ಅಧ್ಯಕ್ಷ ಜ್ಞಾನೇಶ್ವರ ಧರ್ಮಟ್ಟಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅರುಣ ಮಾಚಕನೂರ, ಮುಖ್ಯಾಧಿಕಾರಿ ಬಸವರಾಜ ಮನಗೂಳಿ, ಎಸ್‌.ಪಿ.ನಿಡಸೋಸಿ, ಗಣ್ಯರಾದ ಎನ್‌.ಎಸ್‌.ಚೌಗಲಾ, ಭೀಮು ಬದ್ನಿಕಾಯಿ, ಗಿರಿಗೌಡ ಪಾಟೀಲ, ಆನಂದಗೌಡ ಪಾಟೀಲ, ಬಿ.ಬಿ.ಮುಗಳಿಹಾಳ, ಬಿ.ಎಸ್‌.ಮೋರ್ಡಿ, ಜಾಸ್ಮಿನ ಅಲಾಸೆ, ಗುಂಡುರಾವ ಬದ್ನಿಕಾಯಿ, ಎನ್‌.ಪಿ.ನಕ್ಕರಗುಂದಿ, ಶ್ರೀಶೈಲ ದಾಶ್ಯಾಳ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು, ಮುಖಂಡರು, ಪುರಸಭೆ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ