ಕಾರವಾರ

ದಾಂಡೇಲಿ: ಶಾಸಕ ಆರಿ​‍್ವ. ದೇಶಪಾಂಡೆ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ

ದಾಂಡೇಲಿ: ಶಾಸಕ ಆರಿ​‍್ವ. ದೇಶಪಾಂಡೆ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ

ಲೋಕದರ್ಶನ ವರದಿ 

 

ದಾಂಡೇಲಿ 03: ಹಳಿಯಾಳ ವಿಧಾನಸಭಾ ಕ್ಷೇತ್ರಾದ್ಯಂತ ನಡೆಯುತ್ತಿರುವ ಸ್ವಚ್ಚತಾ ಸಪ್ತಾಹ ಅಭಿಯಾನದ ಅಂಗವಾಗಿ ದಾಂಡೇಲಿ ತಾಲೂಕಿನಲ್ಲಿ ನಗರ ಸಭೆ ವ್ಯಾಪ್ತಿಯ ಹಳಿಯಾಳ ರಸ್ತೆ, ಗ್ರಾಮೀಣ ಪ್ರದೇಶವಾದ ಹಾಳಮಡ್ಡಿ ಮತ್ತಿತರ ಪ್ರಮುಖ ಬೀದಿಗಳಲ್ಲಿ ಶಾಸಕ ಆರ್‌.ವಿ. ದೇಶಪಾಂಡೆ ಸ್ವಚ್ಚತಾ ಕಾರ್ಯಕ್ರಮ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆರ್‌.ವಿ ದೇಶಪಾಂಡೆ ಸ್ವಚ್ಚತೆಯಿಂದ ನಗರದ ಸೌಂದರ್ಯ ಮಾತ್ರವಲ್ಲ ಆರೋಗ್ಯಕರ ವಾತಾವರಣಕ್ಕೆ ನಾಂದಿಯಾಗಲಿದೆ. ಜನರಲ್ಲಿ ಸ್ವಚ್ಚತೆ ಬಗ್ಗೆ  ಅರಿವು ಮೂಡಿಸುವುದರೊಂದಿಗೆ ಸ್ವಚ್ಚ ಪರಿಸರ ನಿರ್ಮಾಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದದ್ದು ನಮ್ಮ ನಿಮ್ಮೇಲ್ಲರ ಕರ್ತವ್ಯ. ದೃಡ ಸಂಕಲ್ಪದೊಂದಿಗೆ ಈ ಸ್ವಚ್ಚತಾ ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದು ನುಡಿದರು. ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳೀಯ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.  


ಸುದ್ದಿ ಓದಿ