ಕಂಪ್ಲಿ

ಮುತ್ತೈದೆಯರಿಗೆ ಉಡಿ ತುಂಬುವ ಪದ್ಧತಿ ಭಾರತೀಯ ಸಂಸ್ಕೃತಿಯ ಪ್ರತೀಕ : ಶ್ರೀದೇವಿ ಶಾಸಕ ಜೆ.ಎನ್‌.ಗಣೇಶ್

ಮುತ್ತೈದೆಯರಿಗೆ ಉಡಿ ತುಂಬುವ ಪದ್ಧತಿ ಭಾರತೀಯ ಸಂಸ್ಕೃತಿಯ ಪ್ರತೀಕ : ಶ್ರೀದೇವಿ ಶಾಸಕ ಜೆ.ಎನ್‌.ಗಣೇಶ್

ಲೋಕದರ್ಶನ ವರದಿ 

         ಕಂಪ್ಲಿ 07 : ಪ್ರತಿಯೊಬ್ಬ ಮಹಿಳೆಗೆ ತವರು ಮನೆಯ ಸೀರೆ ಅತಿಮುಖ್ಯವಾಗಿದೆ. ಮಹಿಳೆ ಕುಟುಂಬದ ಆಧಾರ ಸ್ತಂಭ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ರಾಷ್ಟ್ರದ ಸತ್ಪ್ರಜೆಯಾಗಿ ರೂಪಿಸುವ ಗುರುತರ ಜವಬ್ದಾರಿ ಮಹಿಳೆಯರ ಮೇಲಿದೆ ಎಂದು ಶಾಸಕ ಜೆ.ಎನ್‌.ಗಣೇಶ್ ಅವರ ಧರ್ಮಪತ್ನಿ ಶ್ರೀಮತಿ ಶ್ರೀದೇವಿ ಹೇಳಿದರು.

      ತಾಲೂಕಿನ ನಂ.10 ಮುದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಗೋಡ್‌ಹಾಳ್ ಗ್ರಾಮದ ಕೆಂಚಮ್ಮ ದೇವಸ್ಥಾನದ ಮುಂಭಾಗದಲ್ಲಿ ದಿ.ಜೆ.ಎನ್‌.ವೆಂಕೋಬಣ್ಣ ಹೊಸಪೇಟೆ ಅವರ ಆಶೀರ್ವಾದದಿಂದ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್‌.ಗಣೇಶ್ ಫೌಂಡೇಶನ್ ಹಾಗೂ ಯುವ ಮುಖಂಡ ದೊಡ್ಡ ಬಸವರಾಜ ಬಡಗಿ ಅವರ ನೇತೃತ್ವದಲ್ಲಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಅಂಗವಾಗಿ ಶುಭ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ 101 ಜನ ಮುತ್ತೈದೆಯರಿಗೆ ಉಡಿ ತುಂಬವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ,

           ಇದೇ ಮೊದಲ ಬಾರಿಗೆ ಬೆಳಗೋಡ್‌ಹಾಳ್ ಗ್ರಾಮಕ್ಕೆ ಬಂದಿರುವುದು ಖುಷಿಯ ಜೊತೆಗೆ ಮಹಿಳೆಯರ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಹೆಮ್ಮೆಯಾಗಿದೆ. ಉಡಿ ತುಂಬುವ ಪದ್ಧತಿ ಭಾರತೀಯ ಸಂಸ್ಕೃತಿಯ ಪ್ರತೀಕ. ಇಂತಹ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. 

            ಮಗು ಬೆಳೆದು ಉತ್ತಮ ನಾಗರಿಕನಾಗಬೇಕಾದರೆ ತಾಯಿಯ ಪಾತ್ರ ಮಹತ್ವವಿದೆ ಎಂದರು. ನಂತರ ಯುವ ಮುಖಂಡ ದೊಡ್ಡ ಬಸವರಾಜ ಬಡಗಿ ಮಾತನಾಡಿ, ಬೆಳಗೋಡ್‌ಹಾಳ್ ಗ್ರಾಮದಲ್ಲಿ ಮೊದಲ ಬಾರಿಗೆ ಉಚಿತ ಸಾಮೂಹಿಕ ವಿವಾಹ ಮಾಡಲಾಗುತ್ತಿದೆ. ನ.15ರಂದು ಉಚಿತ ಸಾಮೂಹಿಕ ವಿವಾಹಗಳು ನಡೆಯುವ ಹಿನ್ನಲೆ ಮುಂಚಿತವಾಗಿ 101 ಜನ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಶಾಸಕ ಜೆ.ಎನ್‌.ಗಣೇಶ್ ಅವರ ಧರ್ಮಪತ್ನಿ ಶ್ರೀಮತಿ ಶ್ರೀದೇವಿ ಅವರ ಸಮ್ಮುಖದಲ್ಲಿ ಉಡಿ ತುಂಬುವ ಕಾರ್ಯಕ್ರಮ ನಡೆಸಲಾಯಿತು ಎಂದರು.

              ತದನಂತರ ಶ್ರೀಮತಿ ಶ್ರೀದೇವಿ ಗಣೇಶ್ ಅವರನ್ನು ಮಹಿಳೆಯರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ವೈ.ವಿರುಪಣ್ಣ, ನಬೀ ಸಾಬ್, ಕೆ.ಗಂಗಾಧರ, ರಾಮಕೃಷ್ಣ, ರೇಣುಕಪ್ಪ, ಮಹಾಂತೇಶ, ದುರುಗಪ್ಪ, ರವಿಕುಮಾರ, ಮರಿಸ್ವಾಮಿ, ಬಡಿಗಿ ದುರುಗಪ್ಲ, ಬಡಗಿ ಹನುಮಂತಪ್ಪ, ಸಣ್ಣ ದುರುಗಪ್ಪ, ಶಂಕ್ರಮ್ಮ, ಮರಿಯಮ್ಮ, ಜಿನಿಗಮ್ಮ, ಲಕ್ಷ್ಮಿ, ಶಾರದಮ್ಮ, ಮಲ್ಲಮ್ಮ, ಹುಲಿಗೆಮ್ಮ, ಹನುಮಂತಮ್ಮ ಸೇರಿದಂತೆ ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ