ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಶಂಕುಸ್ಥಾಪನೆ
ಲೋಕದರ್ಶನ ವರದಿ
ಕಂಪ್ಲಿ 07 : ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯೊಂದಿಗೆ ಮೂಲಭೂತ ಸೌಲಭ್ಯಗಳನ್ನು ಜನತೆಗೆ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು. ಸ್ಥಳೀಯ ಸಕ್ಕರೆ ಕಾರ್ಖಾನೆಯ 21/23ನೇ ವಾರ್ಡಿನಲ್ಲಿ 2026-27ನೇ ಸಾಲಿನ ಕೆಕೆಆರ್‌ಡಿಬಿ 2515 ಮ್ಯಾಕ್ರೋ ಯೋಜನೆಯಡಿ ಸುಮಾರು 128 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ರಸ್ತೆ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಪ್ರತಿಯೊಂದು ರಂಗದಲ್ಲಿ ಸಾಕಷ್ಟು ಅನುದಾನದ ಮೂಲಕ ಅಭಿವೃದ್ಧಿ ಮಾಡುವೊದರೊಂದಿಗೆ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಕ್ಷೇತ್ರದ ಜನರ ಆಶೀರ್ವಾದಂತೆ ಪ್ರತಿಯೊಂದು ಹಂತದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಮೊದಲ ಧ್ಯೇಯವಾಗಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಬಿ.ಲಕ್ಷ್ಮಣ, ರಂಗಸ್ವಾಮಿ, ಚಿಟ್ಟಿ, ಆಧಿನಾರಾಯಣ, ಮೈಮೂದ್, ಬಿ.ಶೇಖರ, ಡಿಶ್ ಪ್ರಸಾದ್, ಕರಿಬಸವನಗೌಡ, ಕೆ.ಎಸ್.ಚಾಂದ್‌ಬಾಷಾ, ಸಿ.ಆರ್.ಹನುಮಂತ, ಜಿ.ರಾಮಣ್ಣ, ಎ.ಸಿ.ದಾನಪ್ಪ, ಗೋಪಾಲ, ಆಟೋ ರಘು, ಕೊಟ್ಟಾಲ್ ವಿರೇಶ 9ನೇವಾರ್ಡಸುಧ ಸೇರಿದಂತೆ ಅನೇಕರಿದ್ದರು. ಇಲ್ಲಿನ ಜಾನೂರು ರಸ್ತೆಯ 23ನೇ ವಾರ್ಡಿನ ಸೋಮಪ್ಪ ಬಡಾವಣೆಯಲ್ಲಿ ಲಕ್ಷಾಂತರ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಅಡಿಗಲ್ಲು ಪೂಜೆ ಸಲ್ಲಿಸಿದರು.
ಸಣಾಪುರ ಗ್ರಾಪಂ ವ್ಯಾಪ್ತಿಯ ನಂ.2 ಮುದ್ದಾಪುರ ಗ್ರಾಮದ ಅಭಯ ಸೀತಾರಾಮಯ್ಯ ಲಕ್ಷಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ 4ಲಕ್ಷ 99 ಸಾವಿರ ವೆಚ್ಚದಲ್ಲಿ ಕಲರ್ ಗುಡಿಸಿ ಸೀಟ್ ನ್ನು ಶಾಸಕರು ಉದ್ಘಾಟಿಸಿದರು ನಂ.2 ಮುದ್ದಾಪುರ ಗ್ರಾಮದಲ್ಲಿ 90 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಭೂಮಿ ಪೂಜೆ ಸಲ್ಲಿಸಿದರು. ರಾಮದೇವರ ಗುಡಿ ಅಧ್ಯಕ್ಷ ವಿ ಶಿವಯ್ಯ ಕಾರ್ಯದರ್ಶಿ ಕೋನರೆಡ್ಡಿ ಶ್ವೇತಾ ಭಜನ ಮಂಡಳಿ ಸದಸ್ಯರು ಈ ಸಂದರ್ಭದಲ್ಲಿ ಮುಖಂಡರಾದ ಕೆ.ಭಾಸ್ಕರ್‌ರೆಡ್ಡಿ ವಿರುಪಾಕ್ಷಿ ಪಿ ನಾಗರಾಜ ಎಸ ಶಿವಶಂಕರ್ ರೆಡ್ಡಿ ಸೇರಿದಂತೆ ಅನೇಕರಿದ್ದರು.