ಬಳ್ಳಾರಿ

ಮೂರು ತಿಂಗಳ ಗಂಡು ಮಗುವಿನ ಪೋಷಕರ ಪತ್ತೆಗಾಗಿ ಮನವಿ

ಮೂರು ತಿಂಗಳ ಗಂಡು ಮಗುವಿನ ಪೋಷಕರ ಪತ್ತೆಗಾಗಿ ಮನವಿ

ಲೋಕದರ್ಶನ ವರದಿ 

        ಬಳ್ಳಾರಿ,ನ.07 :  ಇಲ್ಲಿನ ಆಸ್ಪತ್ರೆ ವಾರ್ಡ್‌ ನಲ್ಲಿ ಚಿಕಿತ್ಸೆ ಪಡೆದು ಮಕ್ಕಳ ರಕ್ಷಣಾ ಸಂಸ್ಥೆಯ ಸುಪರ್ದಿಯಲ್ಲಿರುವ ಸುಮಾರು ಮೂರು ತಿಂಗಳ ಗಂಡು ಮಗುವಿನ ಜೈವಿಕ ತಂದೆ-ತಾಯಿಯ ಪತ್ತೆಗಾಗಿ ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ. 

ಆಗಸ್ಟ್‌ 31 ರಂದು ಅಲ್ಲೀಪುರ ಗ್ರಾಮದ ವಾರ್ಡ್‌ ನಂ. 33ರ ನಾಗಪ್ಪನ ಕಟ್ಟೆ ಸಮೀಪದ ಹೊಂಡದಲ್ಲಿ ಅಪರಿಚಿತ ನವಜಾತ ಗಂಡು ಶಿಶುವೊಂದನ್ನು ಯಾರೋ ಎಸೆದು ಹೋಗಿದ್ದರು. ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದುವರೆಗೂ ಮಗುವಿನ ಯಾವುದೇ ಪೋಷಕರು ಪತ್ತೆಯಾಗಿಲ್ಲ. 

ಮಗುವಿನ ಜೈವಿಕ ತಂದೆ ಅಥವಾ ತಾಯಿಯ ಬಗ್ಗೆ ಯಾವುದೇ ಸುಳಿವು ಇದ್ದಲ್ಲಿ ಸಾರ್ವಜನಿಕರು ತಕ್ಷಣವೇ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ: 08392-276461, 9480803049, ಪೊಲೀಸ್ ಕಂಟ್ರೋಲ್ ರೂಂ, ಬಳ್ಳಾರಿ: 08392-258100 ಗೆ ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಪೊಲೀಸ್ ಸಬ್‌-ಇನ್ಸ್‌ ಪೆಕ್ಟರ್ ಪ್ರಕಟಣೆಯಲ್ಲಿ ಕೋರಿದ್ದಾರೆ. 


ಸುದ್ದಿ ಓದಿ