ಬೆಳಗಾವಿ

ಕನ್ನಡಪರ ಸಂಘಟನೆಗಳ ಮುಖಂಡರಿಂದ ಸತೀಶ್ ಜಾರಕಿಹೊಳಿ ಸನ್ಮಾನ

ಕನ್ನಡಪರ ಸಂಘಟನೆಗಳ ಮುಖಂಡರಿಂದ ಸತೀಶ್ ಜಾರಕಿಹೊಳಿ ಸನ್ಮಾನ



ಗೋಕಾಕ 05 : ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಮಹತ್ವದ ಗೊತ್ತುವಳಿಯನ್ನು ಬೆಳಗಾವಿ ಮಹಾನಗರ ಪಾಲಿಕೆ ಅಂಗೀಕರಿಸಿದ ಹಿನ್ನೆಲೆಯಲ್ಲಿ, ಗೋಕಾಕದ ಹಿಲ್ ಗಾರ್ಡನ್ ಕಚೇರಿಗೆ ಭೇಟಿ ನೀಡಿದ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಕನ್ನಡಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ  ಸಚಿವರಾದ ಸನ್ಮಾನ್ಯಶ್ರೀ ಸತೀಶ ಜಾರಕಿಹೊಳಿ ಅವರನ್ನು ಸತ್ಕರಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿಲುವಿಗೆ ಬದ್ಧವಾಗಿ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಹೋರಾಟ ಹಾಗೂ ಕನ್ನಡ ನಾಡು-ನುಡಿಯ ಸಂರಕ್ಷಣೆಗೆ ನೀಡುತ್ತಿರುವ ಕೊಡುಗೆಗಳ ಕುರಿತು ಚರ್ಚಿಸಲಾಯಿತು. ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದು, ಸಚಿವ ಸತೀಶ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ ಕೆಂಪಣ್ಣ ಚೌಕಶಿ. ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಮುರಕುಂಬಿ, ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷರಾದ ಶಿವರೆಡ್ಡಿ ಹುಚ್ಚರೆಡ್ಡಿ. ಕನ್ನಡ ಸೇನೆ ಗೋಕಾಕ್ ತಾಲೂಕ ಅಧ್ಯಕ್ಷರಾದ ಅಪ್ಪಾಸಾಬ್ ಮುಲ್ಲಾ, ಕರವೇ ತಾಲೂಕ ಅಧ್ಯಕ್ಷ ಶೆಟ್ಯಪ್ಪ  ಗಾಡಿವಡ್ಡರ್, ರೆಹಮಾನ್ ಮುಖಾಶಿ. ರವಿ ನಾವಿ, ರಾಜು ವಗ್ಗನವರ, ಲಕ್ಷ್ಮಣ ಮೆಳ್ಳಿಗೇರಿ, ಕರವೇ ಮಹಿಳಾ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಿ ಗಾಡಿವಡ್ಡರ್, ಸಚಿನ್ ಪಾಟೀಲ್,ಮಾಳಪ್ಪ ಪೂಜೇರಿ ಹಾಗೂ ಅನೇಕ ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ