ಮೋದೀಜೀ ಹುಟ್ಟುಹಬ್ಬದ ಪ್ರಯುಕ್ತ ಅರೋಗ್ಯ ತಪಾಸಣೆ, ದಂತ ತಪಾಸಣೆ
ಬೆಳಗಾವಿ 05 : ಜನಪ್ರಿಯ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರ 76ನೆಯ ಹುಟ್ಟು ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾದಸೇವಾ ಸಂಕಲ್ಪ ಅಭಿಯಾನ ದ ನಿಮಿತ್ಯವಾಗಿ ಬಿಜೆಪಿ ಬೆಳಗಾವಿಗ್ರಾಮಾಂತರ ಜಿಲ್ಲೆಯ ವತಿಯಿಂದ ಪಂಥನಗರದ ವೈಷ್ಣವಿ ಆಸ್ಪತ್ರೆ ಹಾಗೂ ಡಾ. ಬಿ ಎಸ್ ಕೋತಿನಮೆಮೋರಿಯಲ್ ಟ್ರಸ್ಟ್ ವತಿಯಿಂದ ಬಾಳೆಕುಂದರಿ ಬಿ. ಕೆಗ್ರಾಮದ ಪಂಥ ನಗರದ ಗುರುಕುಲ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ಹಾಗೂ ದಂತ ತಪಾಸಣೆ, ರಕ್ತದ ಗುಂಪು ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು . ಪ್ರಧಾನ ಮಂತ್ರಿಗಳ ಹುಟ್ಟು ಹಬ್ಬ ಹಾಗೂ ಮುಖ್ಯಮಂತ್ರಿ, ಪ್ರಧಾನಿಯಾಗಿ 25 ವರ್ಷಗಳಾದ ಸುಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಶಿಕ್ಷಕ ವೃಂದಕ್ಕೆಸನ್ಮಾನಿಸಲಾಯಿತು. ಈ ಶಿಬಿರದ ಮುಖ್ಯ ಅತಿಥಿಗಳಾಗಿಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ ಗುರು ಕೋತಿನ, ಶಿಬಿರ ಉದ್ಘಾಟಿಸಿ ಮಾತನಾಡಿ, ಜನಪ್ರಿಯ ಪ್ರಧಾನಮಂತ್ರಿ ಗಳು 12 ವರ್ಷ ಮುಖ್ಯಮಂತ್ರಿಗಳಾಗಿ 13 ವರ್ಷಪ್ರಧಾನ ಮಂತ್ರಿಗಳಾಗಿ ದೇಶದ ಅಭಿವೃದ್ಧಿಗೆ ನಿಸ್ವಾರ್ಥ ಸೇವೆಸಲ್ಲಿಸುತ್ತಿದ್ದಾರೆ. ಸಾಕಷ್ಟು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿರುತ್ತಾರೆ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿರುವ ಇಂತಹ ಪ್ರಧಾನಮಂತ್ರಿ ನಮ್ಮ ದೇಶಕ್ಕೆ ಸಿಕ್ಕಿರುವದು ನಮ್ಮೆಲ್ಲರ ಸೌಭಾಗ್ಯವೆಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಎಸ್ ಸಿಮೋರ್ಚಾ ಅಧ್ಯಕ್ಷ ಯಲ್ಲೇಶ್ ಕೋಲಕಾರ್, ಡಾ ರಶ್ಮಿಪಾಟೀಲ್, ವಿನಾಯಕ ಕೆಂಗೇರಿ ಗುರುಕುಲ ಶಾಲೆಯ ಮುಖ್ಯೋಪಾಧ್ಯಯರಾದ ರೇವತಿ ಕುಲಕರ್ಣಿ, ಪ್ರತಿಭಾ ಹಿರೇಮಠ ಹಾಗೂ ಬಿಜೆಪಿ ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.