ಗ್ರಾಮೀಣರಿಗೆ 125 ದಿನಗಳ ಉದ್ಯೋಗ ಖಾತ್ರಿ: ಮೌಲಾಸಾಬ್ ಯಲವಗಿ
ಲೋಕದರ್ಶನ ವರದಿ
ಹಾವೇರಿ 09 :ಜುಲೈ ಒಂದರಿಂದ ಜಾರಿಗೆ ತಂದಿರುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ ಮತ್ತು ಜೀವನೋಪಾಯ ಅಭಿಯಾನ ಕಾರ್ಯಕ್ರಮ ಅಡಿಯಲ್ಲಿ ರಾಜ್ಯದಲ್ಲಿ ಬರಗಾಲದ ಮುನ್ಸೂಚನೆ ಇರುವುದರಿಂದ ಕೂಲಿ ಕಾರ್ಮಿಕರು ವಲಸೆ ಹೋಗದೆ ಸ್ಥಳೀಯವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸ ನೀಡುವ ಜವಾಬ್ದಾರಿ ಗ್ರಾಮ ಪಂಚಾಯಿತಿಗಳ ಮೇಲಿದೆ ಎಂದು ತಾ.ಪಂ ಸಹಾಯಕ ನಿರ್ದೆಶಕರಾದ ಮೌಲಾಸಾಬ ಯಲವಗಿ ಹೇಳಿದರು. ತಾಲ್ಲೂಕಿನ ಬಸಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆೆ ಹೂಳೆತ್ತುವ ಕೆಲಸವನ್ನು ವೀಕ್ಷಷಣೆ ಮಾಡಿ ಕೂಲಿಕರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗ್ರಾಮೀಣ ಕುಟುಂಬಗಳಿಗೆ ವಾರ್ಷಿಕ ಉದ್ಯೋಗ ಖಾತ್ರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸುವ ಮೂಲಕ ಆರ್ಥಿಕ ಭದ್ರತೆ ಬಲಪಡಿಸುತ್ತದೆ. ವಿಬಿ-ಜಿ ರಾಮ್ ಜಿ ಯೋಜನೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಅರಿವು ಕಾರ್ಯಕ್ರಮ(ಜಛಿ) ಆಯೋಜಿಸಲಾಗಿದೆ ಎಂದು ತಿಳಿಸಿದರು.
ತಾಪಂ ಐಇಸಿ ಸಂಯೋಜಕ ಗೀರೀಶ ಬೆನ್ನೂರ ಮಾತನಾಡಿ ವಿಬಿ-ಜಿ ರಾಮ್ ಜಿ ಯೋಜನೆಯ ರೋಜಗಾರ ದಿನಾಚರಣೇ ಕಾರ್ಯಕ್ರಮದಲ್ಲಿ ಮಾತನಾಡಿ 125 ದಿನಗಳ ಉದ್ಯೋಗ ಖಾತ್ರಿ, ಹೆಚ್ಚಿನ ಕೂಲಿ ಮತ್ತು ಗ್ರಾಮೀಣ ಮೂಲಸೌಕರ್ಯಗಳ ನಿರ್ಮಾಣವೇ ಇದರ ಉದ್ದೇಶ. ಈ ಯೋಜನೆಯು ಈಗ (60:40 ಅನುಪಾತದ ವೆಚ್ಚ ಹಂಚಿಕೆ), ಕೇವಲ ಕೂಲಿ ನೀಡುವುದಕ್ಕೆ ಸೀಮಿತವಾಗದೆ ಜಲ ಭದ್ರತೆ, ಗ್ರಾಮೀಣ ರಸ್ತೆಗಳು ಮತ್ತು ಜೀವನೋಪಾಯಕ್ಕೆ ಅಗತ್ಯವಾದ ಗೋದಾಮುಗಳಂತಹ ಶಾಶ್ವತ ಆಸ್ತಿಗಳ ಸೃಜನೆಗೆ ಹೆಚ್ಚಿನ ಒತ್ತು ನೀಡುತ್ತದೆ. ಈ ಕುರಿತು ಅನುಷ್ಠಾನ ಇಲಾಖೆಗಳಿಗೆ ಆದ್ಯತೆ ನೀಡಲಾಗಿದೆ'' ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯಿತಿ ತಾಂತ್ರಿಕ ಸಂಯೋಜಕರಾದ ಮಹಾಗುಂಢೇಶ್ವರ ಮುಗುಳಿ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲೇಶಪ್ಪ ಮಾದರ, ಜಿಎಕೆ.ಎಸ್ ಹೊನ್ನಪ್ಪ ಕೂಲಿಕಾರರು,ಮೇಟಿಗಳು ಪಂಚಾಯತಿ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.