ಹಾವೇರಿ

ಇಂಟರ್ನ್‌ಶಿಪ್‌ಗೆ ಕಾರ್ಯಸ್ಥಳದ ಕೌಶಲ್ಯ ಮತ್ತು ಅನುಭವ ಅಗತ್ಯ - ಡಾ. ಅನಿತಾ ಹಾಲಮಠ

ಇಂಟರ್ನ್‌ಶಿಪ್‌ಗೆ ಕಾರ್ಯಸ್ಥಳದ ಕೌಶಲ್ಯ ಮತ್ತು ಅನುಭವ ಅಗತ್ಯ - ಡಾ. ಅನಿತಾ ಹಾಲಮಠ

ಲೋಕದರ್ಶನ ವರದಿ 

ಹಾವೇರಿ, 07: ಇಂದಿನ ಸ್ಪರ್ಧಾತ್ಮಕ ಉದ್ಯೋಗ ಕ್ಷೇತ್ರದಲ್ಲಿ ಕೇವಲ ಶೈಕ್ಷಣಿಕ ಜ್ಞಾನ ಹೊಂದಿರುವುದು ಸಾಕಾಗುವುದಿಲ್ಲ. ಇಂಟರ್ನ್‌ಶಿಪ್‌ಗೆ ಸೂಕ್ತ ಸಿದ್ಧತೆ, ಕಾರ್ಯಸ್ಥಳದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಕೌಶಲ್ಯ ಹಾಗೂ ವೃತ್ತಿಪರ ರೀತಿಯಲ್ಲಿ ವರದಿ ಬರೆಯುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಅನಿತಾ ಎನ್‌. ಹಾಲಮಠ ಹೇಳಿದರು.  

ಅವರು ನಗರದ ಪ್ರತಿಷ್ಠಿತ ಕೆ.ಎಲ್‌.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಿದ್ದ "ಇಂಟರ್ನ್‌ಶಿಪ್‌ಗೆ ಸಿದ್ಧತೆ, ಕಾರ್ಯಸ್ಥಳದ ಕೌಶಲ್ಯ ಮತ್ತು ವೃತ್ತಿಪರ ವರದಿ ಬರವಣಿಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪ್ರಮುಖ ಕೌಶಲ್ಯಗಳು" ಎಂಬ ವಿಷಯದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತರಗತಿಯಲ್ಲಿ ಪಡೆಯುವ ಜ್ಞಾನವನ್ನು ಪ್ರಾಯೋಗಿಕ ಕ್ಷೇತ್ರದಲ್ಲಿ ಅನ್ವಯಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇಂಟರ್ನ್‌ಶಿಪ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜ್ಞಾನ ಮತ್ತು ಉದ್ಯೋಗ ಕ್ಷೇತ್ರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.  


ಸುದ್ದಿ ಓದಿ